ಚಂಡೌಲಿ: ಉತ್ತರ ಪ್ರದೇಶದ ಚಂಡೌಲಿಯಲ್ಲಿ ಗೂಡ್ಸ್ ರೈಲಿಗೆ ಸಿಕ್ಕಿ ನಾಲ್ವರು ಸಾವನ್ನಪ್ಪಿದ್ದಾರೆ.
ಡಿಡಿಯು ಜಂಕ್ಷನ್‌ನಿಂದ ಚಂಡೌಲಿಗೆ ರೈಲು ಹೋಗುತ್ತಿದ್ದಾಗ, ಸದರ್ ಕೊಟ್ವಾಲಿ ಪ್ರದೇಶದ ಹಿನೌಟಾ ಗ್ರಾಮದ ಬಳಿಯ ಡೌನ್ ಲೈನ್‌ನಲ್ಲಿ ಈ ದುರ್ಘಟನೆ ನಡೆದಿದೆ. ಘಟನೆ ನಡೆದ ತಕ್ಷಣ ರೈಲಿನ ಲೋಕೋ ಪೈಲಟ್ ರೈಲ್ವೆ ರಕ್ಷಣಾ ದಳ (ಆರ್ಪಿಎಫ್) ದ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಕೊಟ್ವಾಲಿ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ.
ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.