ETV Bharat / bharat

ವಲಸೆ ಕಾರ್ಮಿಕರ ಮೇಲೆ ಹರಿದ ಟ್ರಕ್​... ತಾಯಿ-ಮಗಳು ಸೇರಿ ನಾಲ್ವರ ದುರ್ಮರಣ! - ತಾಯಿ-ಮಗಳು ಸೇರಿ ನಾಲ್ವರ ದುರ್ಮರಣ

ಮಹಾರಾಷ್ಟ್ರದಿಂದ ಮನೆಗೆ ತೆರಳುತ್ತಿದ್ದ ವಲಸೆ ಕಾರ್ಮಿಕರ ಮೇಲೆ ಟ್ರಕ್​ ಹರಿದಿರುವ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ.

4 Migrants Killed In road Accidents
4 Migrants Killed In road Accidents
author img

By

Published : May 12, 2020, 12:22 PM IST

ರಾಯ್​ಬರೇಲಿ: ಮಹಾರಾಷ್ಟ್ರದಿಂದ ಉತ್ತರಪ್ರದೇಶದ ಜೌನ್‌ಪುರ್​ಗೆ ಹೋಗುತ್ತಿದ್ದ ವಲಸೆ ಕಾರ್ಮಿಕರ ಮೇಲೆ ಟ್ರಕ್​ ಹರಿದ ಪರಿಣಾಮ ತಾಯಿ - ಮಗಳು ಸೇರಿದಂತೆ ನಾಲ್ವರು ಮೃತಪಟ್ಟಿರುವ ಅಮಾನವೀಯ ಘಟನೆ ನಡೆದಿದೆ.

ಮಹಾರಾಷ್ಟ್ರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಇವರು ಲಾಕ್​​ಡೌನ್​ ಉಂಟಾದ ಕಾರಣ ಆಟೋ ರಿಕ್ಷಾದಲ್ಲಿ ಬರೋಬ್ಬರಿ 1,300 ಕಿಲೋ ಮೀಟರ್​ ಪ್ರಯಾಣ ಬೆಳೆಸುವ ನಿರ್ಧಾರ ಮಾಡಿ ಕಳೆದ ಮೂರು ದಿನಗಳ ಹಿಂದೆ ಮಹಾರಾಷ್ಟ್ರ ಬಿಟ್ಟಿದ್ದರು.

ಇಂದು ಬೆಳಗ್ಗೆ ಏಕಾಏಕಿ ಟ್ರಕ್​ ಹರಿದ ಕಾರಣ ತಾಯಿ - ಮಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಕಳೆದ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದಿಂದ ಪ್ರಯಾಣ ಬೆಳೆಸಿದ್ದವರ ಮೇಲೆ ಗೂಡ್ಸ್​ ರೈಲು ಹರಿದ ಪರಿಣಾಮ 16 ಮಂದಿ ಸಾವನ್ನಪ್ಪಿದ್ದರು. ಇವರೆಲ್ಲರೂ ಉತ್ತರ ಪ್ರದೇಶದವರು ಎಂದು ತಿಳಿದು ಬಂದಿದೆ. ಇದರ ಮಧ್ಯೆ ಮಧ್ಯಪ್ರದೇಶದ ಝಾನ್ಸಿಯಿಂದ ಉತ್ತರಪ್ರದೇಶದ ಆಗ್ರಾಗೆ ಟ್ರಕ್​ನಲ್ಲಿ ತೆರಳುತ್ತಿದ್ದ ವೇಳೆ ಅದು ಪಲ್ಟಿಯಾಗಿ ಐವರು ಕಾರ್ಮಿಕರು ದುರ್ಮರಣಕ್ಕೀಡಾದ ಘಟನೆ ಸಹ ನಡೆದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.