ETV Bharat / bharat

ಒಡಿಶಾದಲ್ಲಿ ಕಾರು ಪಲ್ಟಿ: ನಾಲ್ವರ ದಾರುಣ ಸಾವು

author img

By

Published : Dec 31, 2020, 10:45 AM IST

ಒಡಿಶಾದ ಕಿಯೋಜರ್​ ಜಿಲ್ಲೆಯಲ್ಲಿ ಕಾರು ಪಲ್ಟಿಯಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನು ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಡಿಶಾದಲ್ಲಿ ಕಾರು ಪಲ್ಟಿಯಾಗಿ ನಾಲ್ವರು ಸಾವು
ಒಡಿಶಾದಲ್ಲಿ ಕಾರು ಪಲ್ಟಿಯಾಗಿ ನಾಲ್ವರು ಸಾವು

ಕಿಯೋಜರ್ (ಒಡಿಶಾ)​: SUV ಕಾರು ಪಲ್ಟಿಯಾದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 4 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಜಿಲ್ಲೆಯ ಪಾಂಡಪದ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮಗಿರಿಯಲ್ಲಿ ಬುಧವಾರ ಮಧ್ಯರಾತ್ರಿ ನಡೆದಿದೆ.

ಒಡಿಶಾದಲ್ಲಿ ಕಾರು ಪಲ್ಟಿಯಾಗಿ ನಾಲ್ವರು ಸಾವು

ಹರಿಚಂದನ್‌ಪುರ ಬಳಿಯ ಜಿರಾಂಗ್‌ಗೆ ಬರುತ್ತಿದ್ದ 11 ಜನರಿದ್ದ SUV ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ 10 ಅಡಿ ಆಳಕ್ಕೆ ಬಿದ್ದಿದೆ. ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಓದಿ: ಏಳು ವಾಹನಗಳ ನಡುವೆ ಸರಣಿ ರಸ್ತೆ ಅಪಘಾತ: ಮೂವರ ದುರ್ಮರಣ

ಸದ್ಯ ಗಾಯಾಳುಗಳನ್ನು ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇನ್ನು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇವರೆಲ್ಲರೂ ಮಯೂರ್ಭಂಜ್ ಜಿಲ್ಲೆಯ ಹತಾಬಡಾಲ ಮೂಲದವರು ಎಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.