ETV Bharat / bharat

ಖಲಿಸ್ತಾನ್ ಜಿಂದಾಬಾದ್​ ಧ್ವಜ ಹಾರಿಸಿದ ನಾಲ್ವರ ಬಂಧನ

author img

By

Published : Aug 21, 2020, 12:24 AM IST

ಸಿರ್ಸಾ ಜಿಲ್ಲೆಯಲ್ಲಿ ಖಲಿಸ್ತಾನ್ ಜಿಂದಾಬಾದ್​ ಎಂದು ಬರೆದ ಧ್ವಜವನ್ನು ಹಾರಿಸಿದ್ದಕ್ಕಾಗಿ ಹರಿಯಾಣ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ.

4 held for hoisting Khalistan flag in Haryana
ಖಲಿಸ್ತಾನ್ ಜಿಂದಾಬಾದ್​ ಧ್ವಜ ಹಾರಿಸಿದ ನಾಲ್ವರ ಬಂಧನ

ಚಂಡಿಗರ್: ಖಲಿಸ್ತಾನ್ ಜಿಂದಾಬಾದ್ ಎಂದು ಬರೆದ ಧ್ವಜ ಹಾರಿಸಿದ್ದಕ್ಕಾಗಿ ಹರಿಯಾಣದ ಸಿರ್ಸಾ ಜಿಲ್ಲೆಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ.

ಕಲಾನ್​ವಾಲಿಯ ಚೌಪಾಲ್ ಎಂಬ ಹಳ್ಳಿಯಲ್ಲಿ ಧ್ವಜವನ್ನು ಹಾರಿಸುವ ಮೂಲಕ ಶಾಂತಿ, ಸಹೋದರತ್ವ ಮತ್ತು ಕೋಮು ಸೌಹಾರ್ದತೆಯನ್ನು ಭಂಗಗೊಳಿಸಲು ಯತ್ನಿಸಿದ ಆರೋಪದ ಮೇಲೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಬಂಧಿತರನ್ನು ರೂಪಿಂದರ್ ಸಿಂಗ್ ಅಲಿಯಾಸ್ ರಿಮ್, ಯುಧ್ವೀರ್ ಸಿಂಗ್ ಅಲಿಯಾಸ್ ಜಾನಿ ಮತ್ತು ಗುರ್ಜಿತ್ ಎಂದು ಗುರುತಿಸಲಾಗಿದೆ. ನಾಲ್ವರಲ್ಲಿ ಇಬ್ಬರು ಧ್ವಜವನ್ನು ಹಾರಿಸಿದ್ದು, ಇನ್ನಿಬ್ಬರು ವೀಡಿಯೊ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

ಈ ಕುರಿತು ಕಲಾವಾಲಿ ಪೊಲೀಸ್ ಠಾಣೆಯಲ್ಲಿ ಇಂಡಿಯನ್ ಪೀನಲ್ ಕೋಡ್ (ಐಪಿಸಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.