ಜಮ್ಮು: ಚೀನಾ ಭಾರತ ಗಡಿ ಉದ್ವಿಗ್ನಗೊಂಡಿದ್ದ ಲಡಾಖ್ ಮತ್ತೆ ಆತಂಕಗೊಂಡಿದೆ.
ಈ ಬಾರಿ ಯುದ್ಧದಿಂದಾಗಿ ಅಲ್ಲ ಲಡಾಖ್ನಲ್ಲಿ ಸಂಭವಿಸಿದ ಲಘು ಭೂಕಂಪದಿಂದ. ರಾಷ್ಟ್ರೀಯ ಸಿಸ್ಮೋಲಾಜಿ ಕೇಂದ್ರದ ಪ್ರಕಾರ ನಿನ್ನೆ ರಾತ್ರಿ 8:15 ರ ಸುಮಾರಿಗೆ ಭೂಮಿಯ 25 ಕಿ.ಮೀಟರ್ ಆಳದಲ್ಲಿ ಈ ಭೂಕಂಪನ ಸಂಭವಿಸಿದೆ ಎಂದು ಹೇಳಲಾಗಿದೆ. ಭೂಮಿ ಕಂಪಿಸಿದ್ದರಿಂದ ಯಾವುದೇ ಹಾನಿ ಆಗಿರುವ ವರದಿ ಆಗಿಲ್ಲ.
ಕಾಶ್ಮೀರ ಕಣಿವೆ, ಕಿಶ್ತವಾರ ಮತ್ತು ದೋಡಾದಲ್ಲಿ ಭೂಮಿ ನಡುಗಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ಪ್ರಮಾಣ ಶೇ 4.5 ರಷ್ಟು ದಾಖಲಾಗಿತ್ತು ಎಂದು ಭಾರತೀಯ ಭೂಗರ್ಭ ಇಲಾಖೆ ಹೇಳಿದೆ.