ETV Bharat / bharat

ಗುಜರಾತ್​: ರಾಜ್​ಕೋಟ್​ನಲ್ಲಿ 4.1 ತೀವ್ರತೆಯ ಭೂಕಂಪ - ಉಪ್ಲೆಟಾ

ಗುಜರಾತ್​ನ ರಾಜ್​ಕೋಟ್ ಜಿಲ್ಲೆಯಲ್ಲಿ 4.1 ತೀವ್ರತೆಯ ಭೂಕಂಪ ಉಂಟಾಗಿದ್ದು, ಯಾವುದೇ ಸಾವು-ನೋವು ವರದಿಯಾಗಿಲ್ಲ.

Rajkot earthquake
ರಾಜ್​ಕೋಟ್​ನಲ್ಲಿ 4.1 ತೀವ್ರತೆಯ ಭೂಕಂಪ
author img

By

Published : Sep 29, 2020, 5:38 PM IST

ರಾಜ್​ಕೋಟ್: ಗುಜರಾತ್​ನ ರಾಜ್​ಕೋಟ್ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ 3.50ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ 4.1 ರಷ್ಟು ತೀವ್ರತೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.

ರಾಜ್​ಕೋಟ್​​ನ ಉಪ್ಲೆಟಾ, ಜೆಟ್ಪುರ, ಧೋರಜಿ, ಗೊಂಡಾಲ್ ನಗರಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಾದ ಚಾರ್ಖಾಡಿ, ಪಾಟೀಡಾಲ್, ಜೆತಲ್ಸರ್, ಮೋತಿವಾಡಿ, ಭುಖಿ, ಮುರ್ಖಾಡ, ಇಸ್ರಾದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.

ಭೂಕಂಪದ ಕೇಂದ್ರ ಬಿಂದು ಉಪ್ಲೆಟಾದಿಂದ 25 ಕಿಲೋ ಮೀಟರ್ ದೂರದಲ್ಲಿದೆ. ಘಟನೆಯಿಂದ ಜನರು ಆತಂಕಗೊಂಡಿದ್ದು, ಯಾವುದೇ ಸಾವು-ನೋವು ವರದಿಯಾಗಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.