ETV Bharat / bharat

3 ಹೆಣ್ಣು ಮಕ್ಕಳೊಂದಿಗೆ ಜಮೀನಿಗೆ ಹೋದ ತಾಯಿ:  ಬಾವಿಯಲ್ಲಿ ಪತ್ತೆಯಾದವು 4 ಶವ! - ಪೊಲೀಸ್ ತನಿಖೆ

ಬಾವಿಯಲ್ಲಿ ಮಹಿಳೆ ಹಾಗೂ ಮೂವರು ಮಕ್ಕಳ ಶವಗಳು ಪತ್ತೆಯಾಗಿದ್ದು, ಘಟನೆಯ ಕಾರಣ ಇನ್ನೂ ತಿಳಿದುಬಂದಿಲ್ಲ.

hospital
hospital
author img

By

Published : Aug 3, 2020, 9:27 AM IST

ಅಹ್ಮದ್‌ನಗರ (ಮಹಾರಾಷ್ಟ್ರ): ತನ್ನ ಮೂವರು ಹೆಣ್ಣು ಮಕ್ಕಳೊಂದಿಗೆ ಜಮೀನಿಗೆ ಹೋದ 32 ವರ್ಷದ ಮಹಿಳೆ ಹಾಗೂ ಮಕ್ಕಳ ಶವಗಳು ಬಾವಿಯಲ್ಲಿ ಪತ್ತೆಯಾಗಿವೆ.

ನಿನ್ನೆ ಸಂಜೆ 6.30ರ ಸುಮಾರಿಗೆ ಬಾವಿಯಲ್ಲಿ ನಾಲ್ವರ ಚಪ್ಪಲಿ ಕಾಣಿಸಿಕೊಂಡಿದ್ದು, ಆ ಬಳಿಕ ಪರಿಶೀಲನೆ ನಡೆಸಿದಾಗ ನಾಲ್ವರ ಶವಗಳು ಬಾವಿಯಲ್ಲಿ ಇರುವುದು ಗೊತ್ತಾಗಿದೆ. ಮಹಾರಾಷ್ಟ್ರದ ಜಮ್ಖೇಡ್ ತಾಲೂಕಿನ ಕುಸದ್ಗಾಂವ್​ನಲ್ಲಿ ಈ ಘಟನೆ ನಡೆದಿದೆ.

ಘಟನೆಯ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಘಟನೆಯು ಕುಸದ್ಗಾಂವ್ ಸೇರಿದಂತೆ ಜಮ್ಖೇಡ್ ತಾಲೂಕಿನಲ್ಲಿ ಕೋಲಾಹಲ ಸೃಷ್ಟಿಸಿದೆ. ಈ ಸಂಬಂಧ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಿಮಿಸಿ ಶವಗಳನ್ನು ಪೋಸ್ಟ್​ಮಾರ್ಟಮ್​ಗೆ ಕಳುಹಿಸಿದ್ದಾರೆ.

ಮೃತರನ್ನು ರಾಮ್‌ಭೌ ಕಾರ್ಲೆ ಅವರ ಪತ್ನಿ ಸ್ವಾತಿ ಕಾರ್ಲೆ (ವಯಸ್ಸು 32), ಮಗಳು ಅಂಜಲಿ (ವಯಸ್ಸು 12), ಮಗಳು ಸೈಲಿ (ವಯಸ್ಸು 12) ಮತ್ತು ಕೋಮಲ್ (ವಯಸ್ಸು 7) ಎಂದು ಗುರುತಿಸಲಾಗಿದೆ.

ಅವರು ಭಾನುವಾರ ಬೆಳಗ್ಗೆ 11 ಗಂಟೆಗೆ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.