ETV Bharat / bharat

ಶ್ರೀರಾಮಮಂದಿರ ನಿರ್ಮಾಣ: ಆ.3/5ರಂದು ಪ್ರಧಾನಿ ಮೋದಿಯಿಂದ ಭೂಮಿ ಪೂಜೆ - ಶ್ರೀರಾಮಜನ್ಮಭೂಮಿ ತಿರ್ಥಕ್ಷೇತ್ರ ಟ್ರಸ್ಟ್​​

ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀರಾಮಮಂದಿರ ದೇಗುಲದ ಭೂಮಿ ಪೂಜೆ ಕಾರ್ಯ ನಡೆಯುವ ದಿನಾಂಕ ನಿಗದಿಗೊಂಡಿದೆ.

foundation of the Ram Temple
foundation of the Ram Temple
author img

By

Published : Jul 18, 2020, 7:57 PM IST

ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀರಾಮಮಂದಿರ ದೇವಸ್ಥಾನದ ಭೂಮಿ ಪೂಜೆ ಆಗಸ್ಟ್​ 3 ಅಥವಾ 5ರಂದು ನಡೆಯಲಿದೆ. ಈ ಎರಡು ದಿನಾಂಕವನ್ನು ಪ್ರಧಾನಿ ನರೇಂದ್ರ ಮೋದಿಗೆ ರವಾನಿಸಲಾಗಿದೆ ಎಂದು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​​ನ ಮುಖಂಡ ಕಾಮೇಶ್ವರ್​ ಚೌಪಾಲ್​ ತಿಳಿಸಿದ್ದಾರೆ.

ಶ್ರೀರಾಮಮಂದಿರ ನಿರ್ಮಾಣಕ್ಕೆ ಆ.3, ಅಥವಾ 5ರಂದು ಭೂಮಿ ಪೂಜೆ

ಮಂದಿರ ನಿರ್ಮಾಣ ಸಂಬಂಧ ಚರ್ಚಿಸಲು ಇಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ಸದಸ್ಯರು ಸಭೆ ಸೇರಿದ್ದರು. ನಿರ್ಮಾಣಕ್ಕಾಗಿ ಭೂಮಿ ಪೂಜೆ ಮಾಡಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನ ನೀಡುವ ಉದ್ದೇಶದಿಂದ ಎರಡು ದಿನಾಂಕ ನಿಗದಿಗೊಳಿಸಲಾಗಿದೆ.

ಇದೀಗ ರಾಮಮಂದಿರ ನಿರ್ಮಾಣ ಕಾರ್ಯ ಉದ್ಘಾಟಿಸಲು ಮೋದಿಯವರಿಗೆ ಎರಡು ದಿನಾಂಕ ನೀಡಲಾಗಿದ್ದು, ಅವರು ಬರುವ ದಿನದಂದು ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಮಾತನಾಡಿರುವ ಟ್ರಸ್ಟ್​ನ ಕಾರ್ಯದರ್ಶಿ ಚಂಪತಿ ರೈ, 4 ಲಕ್ಷ ಪ್ರದೇಶಗಳಿಂದ 10 ಕೋಟಿ ಕುಟುಂಬಗಳಿಂದ ದೇಣಿಗೆ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗಿದ್ದು, ಸದ್ಯದ ಪರಿಸ್ಥಿತಿ ತಿಳಿಗೊಂಡ ಬಳಿಕ ಈ ಕಾರ್ಯಾರಂಭ ಮಾಡುವುದಾಗಿ ಅವರು ತಿಳಿಸಿದ್ದಾರೆ.

ದೇವಸ್ಥಾನ ನಿರ್ಮಾಣ ಕಾರ್ಯ ಮೂರು ಅಥವಾ ನಾಲ್ಕು ವರ್ಷಗಳಲ್ಲಿ ಮುಕ್ತಾಯಗೊಳ್ಳಲಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.