ಇಂದು ಕೇರಳದಲ್ಲಿ 39, ತೆಲಂಗಾಣದಲ್ಲಿ 10 ಹೊಸ ಕೊರೊನಾ ಪ್ರಕರಣಗಳು ಪತ್ತೆ! - ಕೇರಳದಲ್ಲಿ ಕೊವಿಡ್-19 ಪ್ರಕರಣಗಳು
ಇಂದು ಒಂದೇ ದಿನ ಕೇರಳದಲ್ಲಿ 39 ಕೊವಿಡ್-19 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 34 ಪ್ರಕರಣಗಳು ಕಾಸರಗೋಡಿನಲ್ಲಿ ಪತ್ತೆಯಾಗಿವೆ.
ಇಂದು ಕೇರಳದಲ್ಲಿ 39, ತೆಲಂಗಾಣದಲ್ಲಿ 10 ಕೊರೊನಾ ಪ್ರಕರಣಗಳು ಪತ್ತೆ
ಕೇರಳ/ತೆಲಂಗಾಣ: ಇಂದು ಒಂದೇ ದಿನ ಕೇರಳದಲ್ಲಿ 39 ಹಾಗೂ ತೆಲಂಗಾಣದಲ್ಲಿ 10 ಕೊವಿಡ್-19 ಪ್ರಕರಣಗಳು ವರದಿಯಾಗಿವೆ.
ಇಂದು ಪತ್ತೆಯಾದ 39 ಪ್ರಕರಣಗಳ ಪೈಕಿ 34 ಪ್ರಕರಣಗಳು ಕಾಸರಗೋಡಿನಲ್ಲಿ ಪತ್ತೆಯಾಗಿವೆ. ಈ ಮೂಲಕ ಕೇರಳದಲ್ಲಿ ಸೋಂಕಿತರ ಸಂಖ್ಯೆ 164ಕ್ಕೆ ಏರಿಕೆಯಾಗಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಇನ್ನು ತೆಲಂಗಾಣದಲ್ಲಿ 10 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 59ಕ್ಕೆ ಏರಿಕೆಯಾಗಿದೆ. ಲಾಕ್‌ಡೌನ್ ಮತ್ತು ಕರ್ಫ್ಯೂ ಇಲ್ಲದಿದ್ದರೆ ಪರಿಸ್ಥಿತಿ ಇನ್ನೂ ಭೀಕರವಾಗಿರುತ್ತಿತ್ತು. ಇದು ನಿರ್ಲಕ್ಷ್ಯ ವಹಿಸುವ, ಅಜಾಗರೂಕತೆ ತೋರಿಸುವ ಸಮಯವಲ್ಲ. ಸ್ವಯಂ ನಿರ್ಬಂಧವೇ ಉತ್ತಮ ರಕ್ಷಣೆಯ ಮಾರ್ಗವಾಗಿದೆ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹೇಳಿದ್ದಾರೆ.