ಕೊಚ್ಚಿ(ಕೇರಳ): ದುಬೈನಿಂದ 177 ಪ್ರಯಾಣಿಕರು ವಿಮಾನದಲ್ಲಿ ನಿನ್ನೆ ರಾತ್ರಿ 8.15ಕ್ಕೆ ಕೊಚ್ಚಿಗೆ ಬಂದಿಳಿದಿದ್ದರೆ, ಬಹ್ರೈನ್ನಿಂದ ಇನ್ನೊಂದು ಏರೋಪ್ಲೇನ್ ಸುಮಾರು 184 ವಲಸಿಗರೊಂದಿಗೆ ಕೋಝಿಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಕೊರೊನಾ ವೈರಸ್ ಲಾಕ್ಡೌನ್ನಿಂದಾಗಿ ವಿದೇಶಗಲಲ್ಲಿ ಸಿಲುಕಿದ್ದ ಭಾರತೀಯರನ್ನು ಮರಳಿ ಕರೆತರಲು ಕೇಂದ್ರ ಸರ್ಕಾರ ಕೈಗೊಂಡ ವಂದೇ ಭಾರತ್ ಮಿಷನ್ನ ಭಾಗವಾಗಿ ಈ ವಿಮಾನಗಳು ಪ್ರಯಾಣಿಕರನ್ನು ಕೇರಳಕ್ಕೆ ತಂದಳಿಸಿವೆ.
ಎಲ್ಲರಿಗೂ ಮೊದಲು ಥರ್ಮಲ್ ಸ್ಕ್ರೀನಿಂಗ್ ನಡೆಸಿ ಕ್ವಾರಂಟೈನ್ನ ನಿಯಮಗಳನ್ನು ತಿಳಿಸಲಾಯಿತು. ಗರ್ಭಿಣಿಯರು, ಮಕ್ಕಳ ಮತ್ತು ವಯಸ್ಸಾದವರಿಗೆ ತಮ್ಮ ಮನೆಯಲ್ಲಿಯೇ ಕ್ವಾರಂಟೈನ್ಗೆ ಅವಕಾಶ ನೀಡಲಾಗಿದೆ. ಉಳಿದವರನ್ನು ರಾಜ್ಯ ರಸ್ತೆ ಸಾರಿಗೆ ಬಸ್ಗಳಲ್ಲಿ ಆಯಾ ಜಿಲ್ಲೆಗಳ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲಾಗಿದೆ.