ETV Bharat / bharat

ಇಂದು ದೇಶದಲ್ಲಿ ಕಡಿಮೆ ಸೋಂಕಿತ ಪ್ರಕರಣಗಳು ಪತ್ತೆ; ಯಮಸ್ವರೂಪಿ ಖಾಯಿಲೆಯಿಂದ 326 ಮಂದಿ ಬಚಾವ್ - ಕೋವಿಡ್​-19

ಕಳೆದ ಒಂದು ವಾರದಿಂದ ದೇಶದಲ್ಲಿ ನಾಗಾಲೋಟದಲ್ಲಿ ಸಾಗಿದ ಕೊರೊನಾ ಸೋಂಕಿತರ ಸಂಖ್ಯೆ ಇಂದು ಕಡಿಮೆಯಾಗಿದೆ. ಈ ಬಗ್ಗೆ ಸಂಜೆ 4 ಗಂಟೆಗೆ ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು.

Lav Aggarwal
Lav Aggarwal
author img

By

Published : Apr 7, 2020, 4:49 PM IST

Updated : Apr 7, 2020, 5:00 PM IST

ನವದೆಹಲಿ: ದೇಶಾದ್ಯಂತ ಕೊರೊನಾ ಆರ್ಭಟ ಜೋರಾಗಿದೆ ಎಂಬ ಸುದ್ದಿಗಳ ನಡುವೆ ಇಂದು ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ: ಕೇಂದ್ರ ಸರ್ಕಾರ

ಒಂದು ವಾರಕ್ಕೆ ಹೋಲಿಕೆ ಮಾಡಿದಾಗ ಇಂದು ದೇಶದಲ್ಲಿ ಸೋಂಕಿತ ಪ್ರಕರಣಗಳು ಕಡಿಮೆಯಾಗಿವೆ. ಕಳೆದ 24 ಗಂಟೆಯಲ್ಲಿ 354 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ದೇಶದಲ್ಲಿ ಸದ್ಯ 4,421 ಜನರು ಮಾರಕ ಸೋಂಕಿನಿಂದ ಬಳಲುತ್ತಿದ್ದು, 326 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲಾವ್​ ಅಗರವಾಲ್​ ತಿಳಿಸಿದರು.

ಇಲ್ಲಿಯವರೆಗೆ ದೇಶದಲ್ಲಿ 1,07,006 ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, 136 ಸರ್ಕಾರಿ ಹಾಗೂ 59 ಖಾಸಗಿ ಲ್ಯಾಬ್​ಗಳಲ್ಲಿ ಇದರ ಟೆಸ್ಟ್​ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಸೋಂಕಿತರಿಗೆ ಐಸೋಲೇಷನ್​ ವ್ಯವಸ್ಥೆ ನೀಡಲು ರೈಲ್ವೆ ಕೋಚ್​ ಬಳಕೆ ಮಾಡಿಕೊಳ್ಳುತ್ತಿದ್ದು, ಈಗಾಗಲೇ 40,000 ಬೆಡ್‌ಗಳು​ ಸಿದ್ಧಗೊಂಡಿವೆ ಎಂದು ತಿಳಿಸಿದ್ದಾರೆ. ಪ್ರತಿ ದಿನ 375 ಬೆಡ್​ ಸಿದ್ಧಗೊಳ್ಳುತ್ತಿದ್ದು, ದೇಶದ 133 ಪ್ರದೇಶಗಳಲ್ಲಿ ಈ ಕೆಲಸ ನಡೆದಿದೆ ಎಂದಿದ್ದಾರೆ.

Last Updated : Apr 7, 2020, 5:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.