ETV Bharat / bharat

ಡೆಡ್ಲಿ ವೈರಸ್​ ಕೊರೊನಾ ಸೋಂಕಿಗೆ 31 ವರ್ಷದ ಪೊಲೀಸ್​ ಕಾನ್ಸ್​ಟೇಬಲ್​ ಬಲಿ! - 31 ವರ್ಷದ ಪೊಲೀಸ್​ ಕಾನ್ಸ್​ಟೇಬಲ್​ ಬಲಿ

ಮಹಾಮಾರಿ ಕೊರೊನಾ ವೈರಸ್​ಗೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ 31 ವರ್ಷದ ಪೊಲೀಸ್​ ಕಾನ್ಸ್​ಟೇಬಲ್​​ ಬಲಿಯಾಗಿದ್ದು, ಪೊಲೀಸ್​ ಇಲಾಖೆಯಲ್ಲಿ ಆತಂಕ ಶುರುವಾಗಿದೆ.

31-Year-Old Constable died
31-Year-Old Constable died
author img

By

Published : May 6, 2020, 7:22 PM IST

ನವದೆಹಲಿ: ಮಹಾಮಾರಿ ಕೊರೊನಾ ವೈರಸ್​​ ಇದೀಗ 31 ವರ್ಷದ ಪೊಲೀಸ್​ ಕಾನ್ಸ್​​​ಟೇಬಲ್​ ಬಲಿ ಪಡೆದುಕೊಂಡಿದ್ದು, ದೆಹಲಿಯಲ್ಲಿ ಸಾವನ್ನಪ್ಪಿರುವ ಮೊದಲ ಪೊಲೀಸ್​ ಪೇದೆ ಪ್ರಕರಣ ಇದಾಗಿದೆ.

  • The sudden demise of late Constable Amit Kumar from PS Bharat Nagar has saddened the police fraternity. We stand by his family in this hour of grief and pray to the Almighty to provide strength to bear this loss. All assistance to his family will be provided.

    — CP Delhi #DilKiPolice (@CPDelhi) May 6, 2020 " class="align-text-top noRightClick twitterSection" data=" ">

ದೆಹಲಿಯಲ್ಲಿ ಇಲ್ಲಿಯವರೆಗೆ 70 ಪೊಲೀಸರಿಗೆ ಈ ಸೋಂಕು ಕಂಡು ಬಂದಿದ್ದು, ಅವರ ಪೈಕಿ ಪೊಲೀಸ್ ಇಲಾಖೆಯಲ್ಲಿ ಸಾವನ್ನಪ್ಪಿರುವ ಮೊದಲ ಕಾನ್ಸ್​ಟೇಬಲ್​ ಇವರಾಗಿದ್ದಾರೆ. ಇವರಿಗೆ ಕಳೆದ ಕೆಲ ದಿನಗಳಿಂದ ರಾಮ್​ ಮನೋಹರ್​ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ಸಂಜೆಯವರೆಗೆ ಕೋವಿಡ್​​-19 ಯಾವುದೇ ಗುಣಲಕ್ಷಣ ಇವರಲ್ಲಿ ಕಂಡು ಬಂದಿರಲಿಲ್ಲ. ಆದರೆ ದಿಢೀರ್​ ಆಗಿ ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡು ಸಾವನ್ನಪ್ಪಿದ್ದಾರೆ. ಇವರ ಕೊರೊನಾ ವರದಿ ಇಂದು ಬಹಿರಂಗಗೊಂಡಿದ್ದು, ಕೊರೊನಾ ಇರುವುದು ಕನ್ಫರ್ಮ್​ ಆಗಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್​ ಮಾಡಿ ಸಂತಾಪ ಸೂಚಿಸಿರುವ ದೆಹಲಿ ಪೊಲೀಸ್​ ಕಮೀಷನರ್​ ಎಸ್​ಎನ್​ ಶ್ರೀವಾಸ್ತವ್​​, ಮೃತ ಕಾನ್ಸ್​ಟೇಬಲ್​ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಹೇಳಿದ್ದಾರೆ. ​ಪೊಲೀಸ್​ ಕಾನ್ಸ್​ಟೇಬಲ್​ ಅಮಿತ್​ ರಾಣಾ ಹರಿಯಾಣದ ಸೋನಿಪತ್​​ನವರಾಗಿದ್ದು, ಭಾರತ್​ನಗರ ಪೊಲೀಸ್​ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಮೂರು ವರ್ಷದ ಮಗುವಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.