ETV Bharat / bharat

ಹೈದರಾಬಾದ್​ನಲ್ಲಿ ಛತ್ತೀಸ್​ಗಡದ 300 ವಲಸೆ ಕಾರ್ಮಿಕರು ಅತಂತ್ರ... ಬಘೇಲ್ ಸರ್ಕಾರಕ್ಕೆ ಬಡಪಾಯಿಗಳ ಮೊರೆ

ಛತ್ತೀಸ್​ಗಡದಿಂದ ಬಂದಿದ್ದ 300 ವಲಸೆ ಕಾರ್ಮಿಕರು ತೆಲಂಗಾಣದ ಹೈದರಾಬಾದ್​ನಲ್ಲಿ ಸಿಲುಕಿಕೊಂಡಿದ್ದಾರೆ. ಅತಂತ್ರವಾಗಿರುವ ತಮ್ಮನ್ನ ಮರಳಿ ತಾಯ್ನಾಡಿಗೆ ಕರೆಸಿಕೊಳ್ಳಿ ಎಂದು ಸಿಎಂ ಭೂಪೇಶ್​ ಬಘೇಲ್​ ಅವರಿಗೆ​ ಮನವಿ ಮಾಡಿದ್ದಾರೆ.

author img

By

Published : Apr 24, 2020, 9:48 AM IST

Migrant labourers from Ch'garh stranded in Hyderabad seek govt’s help
ಹೈದ್ರಾಬಾದ್​ನಲ್ಲಿ ಸಿಲುಕಿದ ಛತ್ತೀಸ್​ಗಡದ 300 ವಲಸೆ ಕಾರ್ಮಿಕರು..ಸಹಾಯಕ್ಕಾಗಿ ಸಿಎಂ ಭೂಪೇಶ್​ ಬಾಗೆಲ್​ ಮನವಿ

ಹೈದರಾಬಾದ್(ತೆಲಂಗಾಣ)​: ನೊವೆಲ್​ ಕೊರೊನಾ ವೈರಸ್​ ಹರಡುವುದನ್ನ ತಡೆಗಟ್ಟಲು ದೇಶಾದ್ಯಂತ ಲಾಕ್​ಡೌನ್​ ಆದೇಶ ಜಾರಿಯಲ್ಲಿದೆ. ಹೀಗಾಗಿ ಎಲ್ಲ ಸಾರಿಗೆ ವ್ಯವಸ್ಥೆಯನ್ನು ಬಂದ್​ ಮಾಡಲಾಗಿದೆ. ಆದ್ರೆ, ಛತ್ತೀಸ್​ಗಡದಿಂದ ಹೈದರಾಬಾದ್​ಗೆ ಬಂದಿದ್ದ 300 ವಲಸೆ ಕಾರ್ಮಿಕರು ಹೈದರಾಬಾದ್​ನಲ್ಲಿ ಸಿಲುಕಿಕೊಂಡಿದ್ದಾರೆ. ಇವರೀಗ ತಮಗೆ ಸಹಾಯ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದಾರೆ.

ಈ ಕಾರ್ಮಿಕರು ಛತ್ತೀಸ್​ಗಡದ ರಾಜನಂದಗಾಂವ್ ಜಿಲ್ಲೆಗೆ ಸೇರಿದವರಾಗಿದ್ದು, ಮರಳಿ ತಾಯ್ನಾಡಿಗೆ ಹಿಂದಿರುಗಲು ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಸಿಎಂ ಭೂಪೇಶ್​ ಬಘೇಲ್​ ಸರ್ಕಾರಕ್ಕೆ ಬೇಡಿಕೊಂಡಿದ್ದಾರೆ.

ಇಷ್ಟು ದಿನ ನಾವು ಇಲ್ಲಿ ಸಿಲುಕಿಕೊಳ್ಳತ್ತೇವೆ ಅಂದುಕೊಂಡಿರಲಿಲ್ಲ. ಮಾರ್ಚ್​ 24ರಂದು ಲಾಕ್​ಡೌನ್​ ಘೋಷಣೆಯಾದಾಗ ಇದು ಕೇವಲ 21 ದಿನಗಳ ಆದೇಶ ಅಂದುಕೊಂಡಿದ್ದೆವು. ಆದರೆ, ಲಾಕ್​ಡೌನ್​ ಮುಂದುವರೆದಿದ್ದು, ನಾವು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದೇವೆ. ನಮ್ಮ ಬಳಿ ಹಣವಿಲ್ಲ. ದಯವಿಟ್ಟು ನಮ್ಮನ್ನ ಇಲ್ಲಿಂದ ರಕ್ಷಿಸಿ, ಛತ್ತೀಸ್​ಗಡ ರಾಜ್ಯದಲ್ಲಿರುವ ತಮ್ಮ ಮನೆಗೆ ತಲುಪಿಸಿ ಎಂದು ಕಾರ್ಮಿಕರು ಸಿಎಂಗೆ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.