ETV Bharat / bharat

ಮೈಸೂರು ಮತ್ತು ಕೊಡಗಿಗೆ ಸೌದಿ, ಇರಾನ್, ಇಸ್ರೇಲ್​, ಯುಎಇ ಇನ್ನಷ್ಟು ಸನಿಹ.. - ನಾಗರಿಕ ವಿಮಾನಯಾನ ಕಾರ್ಯದರ್ಶಿ ಪ್ರದೀಪ್​ ಸಿಂಗ್ದ ಖರೊಲ

ಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್​, ಈ ಹಿಂದೆ ಭರವಸೆ ನೀಡಿದ್ದಂತೆ ಏವಿಯೇಷನ್​ ಟರ್ಬೈನ್​ ಇಂಧನ (ಎಟಿಎಫ್​) ಮೇಲಿನ ತೆರಿಗೆಯನ್ನು ರಾಜ್ಯ ಸರ್ಕಾರದ ವತಿಯಿಂದ ಕಡಿತಗೊಳಿಸಲಾಗಿದೆ. ಹೆಚ್ಚುವರ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡಲು ಇದಕ್ಕಿಂತ ಬೇರೆ ನಿರ್ಧಾರಬೇಕಿಲ್ಲ ಎಂಬುದನ್ನು ಕಾರ್ಯದರ್ಶಿಯ ಗಮನಕ್ಕೆ ತಂದರು.

ಸಾಂದರ್ಭಿಕ ಚಿತ್ರ
author img

By

Published : Aug 31, 2019, 8:28 PM IST

ತಿರುವನಂತಪುರ: ಪ್ರಸಕ್ತ ವರ್ಷದಿಂದಲೇ ಕೇರಳದ ನಾಲ್ಕು ವಿಮಾನ ನಿಲ್ದಾಣಗಳಿಂದ ಹೆಚ್ಚುವರಿಯಾಗಿ 30ಕ್ಕೂ ಅಧಿಕ ವಿಮಾನಗಳ ಹಾರಾಟ ನಡೆಸಲಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಕಾರ್ಯದರ್ಶಿ ಪ್ರದೀಪ್​ ಸಿಂಗ್ದ ಖರೊಲ ತಿಳಿಸಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಕರೆದಿದ್ದ ವಾಯುವಾಯನ ಸಂಸ್ಥೆಗಳ ಮುಖ್ಯಸ್ಥರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್​, ಈ ಹಿಂದೆ ಭರವಸೆ ನೀಡಿದ್ದಂತೆ ಏವಿಯೇಷನ್​ ಟರ್ಬೈನ್​ ಇಂಧನ (ಎಟಿಎಫ್​) ಮೇಲಿನ ತೆರಿಗೆಯನ್ನು ರಾಜ್ಯ ಸರ್ಕಾರದ ವತಿಯಿಂದ ಕಡಿತಗೊಳಿಸಲಾಗಿದೆ. ಹೆಚ್ಚುವರ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡಲು ಇದಕ್ಕಿಂತ ಬೇರೆ ನಿರ್ಧಾರಬೇಕಿಲ್ಲ ಎಂಬುದನ್ನು ಕಾರ್ಯದರ್ಶಿಯ ಗಮನಕ್ಕೆ ತಂದರು.

ಒಂದು ವೇಳೆ ಹೆಚ್ಚಿನ ವಿಮಾನಗಳ ಹಾರಾಟಕ್ಕೆ ಅವಕಾಶ ಮಾಡಿಕೊಟ್ಟರೆ ಎಟಿಎಫ್​ ಮೇಲಿನ ತೆರಿಗೆಯನ್ನು ಇನ್ನಷ್ಟು ಕಡಿತಗೊಳಿಸುತ್ತೇವೆ ಎಂದು ಸಿಎಂ ಅಭಯ ನೀಡಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಸಂಪರ್ಕ ಕಲ್ಪಿಸುತ್ತಿರುವ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಹೆಚ್ಚಿನ ದರ ವಿಧಿಸುತ್ತಿವೆ ಎಂಬುದನ್ನು ಸಭೆಯಲ್ಲಿ ಗಮನ ಸೆಳೆದರು.

ನಾಗರಿಕ ವಿಮಾನಯಾನ ಹೊರಡಿಸಿದ ಈ ಘೋಷಣೆಯಡಿ ಕರ್ನಾಟಕದ ಮೈಸೂರು, ಕೊಡಗು ಜಿಲ್ಲೆಗಳಿಗೆ ಹತ್ತಿರವಿರುವ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಒಳಗೊಂಡಿದೆ. ಇದು ಈ ಭಾಗದ ಜನರಿಗೆ ಮಧ್ಯಪ್ರಾಚ್ಯದ ಸೌದಿ, ಇರಾನ್, ಇರಾಕ್​, ಯುಎಇ, ಈಜಿಫ್ತ್​, ಸಿರಿಯಾ ಸೇರಿದಂತೆ ಇತರೆ ರಾಷ್ಟ್ರಗಳಿಗೆ ತೆರಳಲು ಅನುಕೂಲವಾಗಲಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.