ಶ್ರೀನಗರ: ದೇಶ 73ನೇ ಸ್ವತಂತ್ರ ಸಂಭ್ರಮದಲ್ಲಿದ್ದು, ಇದರ ಮಧ್ಯೆ ಕದನ ವಿರಾಮ ಉಲ್ಲಂಘನೆ ಮಾಡಿರುವ ಪಾಕ್ನ ಮೂವರು ಯೋಧರನ್ನ ಭಾರತೀಯ ಯೋಧರು ಹೊಡೆದುರುಳಿಸಿದ್ದಾರೆಂದು ತಿಳಿದು ಬಂದಿದೆ.
ಉರಿ ಹಾಗೂ ರಾಜೌರಿ ಗಡಿ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ಗುಂಡಿನ ಚಕಮಕಿ ನಡೆಸುತ್ತಿದ್ದ ಪಾಕ್ ಯೋಧರ ಮೇಲೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದಾಗ ಎದುರಾಳಿ ಸೇನೆಯ ಮೂವರು ಯೋಧರು ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಡಾನ್ ಪತ್ರಿಕೆ ಸಹ ವರದಿ ಮಾಡಿದ್ದು, ಅಲ್ಲಿನ ಯೋಧರು ಸಾವನ್ನಪ್ಪಿರುವುದ ನಿಜ ಎಂದು ಲೈನ್ ಆಫ್ ಕಂಟ್ರೋಲ್ನ ಸಾರ್ವಜನಿಕ ಸಂಪರ್ಕಧಿಕಾರಿ ಮೇಜರ್ ಜನರಲ್ ಆಸೀಫ್ ಗಫೂರ್ ತಿಳಿಸಿದ್ದಾರೆ.
-
In efforts to divert attention from precarious situation in IOJ&K,Indian Army increases firing along LOC.
— DG ISPR (@OfficialDGISPR) August 15, 2019 " class="align-text-top noRightClick twitterSection" data="
3 Pakistani soldiers embraced shahadat. Pakistan Army responded effectively. 5 Indian soldiers killed, many injured, bunkers damaged. Intermittent exchange of fire continues. pic.twitter.com/wx1RoYdiKE
">In efforts to divert attention from precarious situation in IOJ&K,Indian Army increases firing along LOC.
— DG ISPR (@OfficialDGISPR) August 15, 2019
3 Pakistani soldiers embraced shahadat. Pakistan Army responded effectively. 5 Indian soldiers killed, many injured, bunkers damaged. Intermittent exchange of fire continues. pic.twitter.com/wx1RoYdiKEIn efforts to divert attention from precarious situation in IOJ&K,Indian Army increases firing along LOC.
— DG ISPR (@OfficialDGISPR) August 15, 2019
3 Pakistani soldiers embraced shahadat. Pakistan Army responded effectively. 5 Indian soldiers killed, many injured, bunkers damaged. Intermittent exchange of fire continues. pic.twitter.com/wx1RoYdiKE
ನಿನ್ನೆ ಸ್ವತಂತ್ರ್ಯೋತ್ಸವ ಆಚರಣೆ ಮಾಡಿದ್ದ ಪಾಕ್, ಇಂದು ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಅಧಿಕಾರದ ಆರ್ಟಿಕಲ್ 370 ರದ್ದುಪಡಿಸಿರುವುದನ್ನ ವಿರೋಧಿಸಿ ಕರಾಳ ದಿನ ಆಚರಣೆ ಮಾಡುತ್ತಿದೆ.
ಇನ್ನು ಪಾಕ್ ಸೈನಿಕರು ಭಾರತೀಯ ಐವರು ಯೋಧರನ್ನು ಹೊಡೆದುರುಳಿಸಿದೆ ಎಂಬ ಮಾಹಿತಿ ನೀಡಿದ್ದು, ಅದನ್ನ ಇಂಡಿಯನ್ ಆರ್ಮಿ ಅಲ್ಲಗಳೆದಿದ್ದು, ನಮ್ಮ ಯಾವುದೇ ಯೋಧರು ಘಟನೆಯಲ್ಲಿ ಹುತಾತ್ಮರಾಗಿಲ್ಲ ಎಂದು ತಿಳಿಸಿದೆ.