ETV Bharat / bharat

ಭೂತ ಶಿಕ್ಷಣ ಕಲಿಯೋಕೆ ಬಂದ ಮೂವರು ವಿದೇಶಿ ವಿದ್ಯಾರ್ಥಿಗಳು.. - Foreign medical students

ಇದರಲ್ಲಿ 3 ವಿದ್ಯಾರ್ಥಿಗಳು ವಿದೇಶಿಯರು ಎಂದು ತಿಳಿದು ಬಂದಿದೆ. 6 ತಿಂಗಳ ಅವಧಿಯಲ್ಲಿ ಅಸಾಮಾನ್ಯ ಘಟನೆಗಳೊಂದಿಗೆ ಗುರುತಿಸಿಕೊಂಡಿರುವ ಒಂದು ಡಿಸಾರ್ಡರ್​ ಆದ ಮೈಕ್ರೋ-ಸೊಮ್ಯಾಟಿಕ್ ಡಿಸಾರ್ಡರ್ ಬಗ್ಗೆ ನಿರ್ದಿಷ್ಟವಾಗಿ ಹಾಗೂ ವಿಸ್ತಾರವಾಗಿ ಕಲಿಸಲಾಗುತ್ತದೆ..

3 foreigners took admission in bhoot vidya certificate course of bhu
ಭೂತ ಶಿಕ್ಷಣ ಕಲಿಯಲು ಮುಂದಾಗಿದ್ದಾರೆ ಮೂವರು ವಿದೇಶಿಗರು...!!
author img

By

Published : Jul 3, 2020, 6:45 PM IST

ವಾರಣಾಸಿ(ಉತ್ತರ ಪ್ರದೇಶ): ವಿದೇಶಿ ವೈದ್ಯಕೀಯ ವಿದ್ಯಾರ್ಥಿಗಳೂ ಕೂಡ ವಾರಣಾಸಿಯ ಕಾಶಿ ಹಿಂದೂ ವಿಶ್ವವಿದ್ಯಾಲಯದ ಆಯುರ್ವೇದ ವಿಭಾಗದಲ್ಲಿ ಭೂತ ಶಿಕ್ಷಣವನ್ನು ಕಲಿಯಲಿದ್ದಾರೆ. ಅರ್ಜಿಯ ಕೊನೆಯ ದಿನಾಂಕ ಮುಗಿದ ಕೂಡಲೇ ಪ್ರವೇಶ ಆರಂಭಿಸಲಾಗುವುದು. ವಿದೇಶದಲ್ಲಿ ದೆವ್ವ-ಭೂತಗಳನ್ನು ಮೂಢನಂಬಿಕೆ ಎಂದು ಪರಿಗಣಿಸಲಾಗುತ್ತದೆ. ಏತನ್ಮಧ್ಯೆ ವಿದೇಶದಿಂದ ಬಂದು ಈ ಕೋರ್ಸ್‌ಗೆ ಆಸಕ್ತಿ ತೋರಿಸುವುದು ವಿಶೇಷ ಎನಿಸಿದೆ.

6 ತಿಂಗಳ ಈ ಕೋರ್ಸ್‌ನಲ್ಲಿ ಕೇವಲ 5 ಸೀಟುಗಳು ಮಾತ್ರ ಇವೆ. 6 ತಿಂಗಳಿಗೆ ಕಟ್ಟಬೇಕಾದ ಶುಲ್ಕ ಐವತ್ತು ಸಾವಿರ ರೂಪಾಯಿ. ಈಗಾಗಲೇ ಈ ಕೋರ್ಸ್​ ಸೇರಲು 9 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 3 ವಿದ್ಯಾರ್ಥಿಗಳು ವಿದೇಶಿಯರು ಎಂದು ತಿಳಿದು ಬಂದಿದೆ. 6 ತಿಂಗಳ ಅವಧಿಯಲ್ಲಿ ಅಸಾಮಾನ್ಯ ಘಟನೆಗಳೊಂದಿಗೆ ಗುರುತಿಸಿಕೊಂಡಿರುವ ಒಂದು ಡಿಸಾರ್ಡರ್​ ಆದ ಮೈಕ್ರೋ-ಸೊಮ್ಯಾಟಿಕ್ ಡಿಸಾರ್ಡರ್ ಬಗ್ಗೆ ನಿರ್ದಿಷ್ಟವಾಗಿ ಹಾಗೂ ವಿಸ್ತಾರವಾಗಿ ಕಲಿಸಲಾಗುತ್ತದೆ.

ಇನ್ನೂ, ಪ್ರತಿಯೊಬ್ಬರೂ ಭೂತ ಶಿಕ್ಷಣವನ್ನು ಅಧ್ಯಯನ ಮಾಡಲು ಸಾಧ್ಯವಿಲ್ಲ. ಈ ಶಿಕ್ಷಣವು ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾತ್ರವೇ ಮೀಸಲಿಡಲಾಗಿದೆ. ಅದು ಆಧುನಿಕ ವೈದ್ಯಕೀಯ ಅಥವಾ ಆಯುರ್ವೇದ ವಿಭಾಗವೂ ಆಗಿರಬಹುದು. ಆದರೆ, ವೈದ್ಯಕೀಯ ವಿಭಾಗವಾಗಿರಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.