ನವದೆಹಲಿ: ಹೊಸ ಮಾದರಿಯ ಸಮೀಕ್ಷಾ ವಿಧಾನ ಬಳಸಿ ನಡೆಸಲಾದ ಅಧ್ಯಯನದ ಪ್ರಕಾರ, ಹೆಚ್ಚುತ್ತಿರುವ ಸಮುದ್ರ ಮಟ್ಟದ ಬಗ್ಗೆ ಶೇ 88ರಷ್ಟು ಭಾರತೀಯರು ನಿರ್ಲಕ್ಷ್ಯೆ ತೊರುತ್ತಿದ್ದಾರೆ ಎಂದು ತಿಳಿಸಿದೆ.
ಭಾರತದಲ್ಲಿ ಹವಾಮಾನ ವೈಪರೀತ್ಯ ಯಥಾವತ್ತಾಗಿ ಮುಂದುವರಿದರೇ ಸಮುದ್ರ ಮಟ್ಟದ ಏರಿಕೆಯು ನಿರೀಕ್ಷೆಗೂ ಮೀರಿ ಹೆಚ್ಚಳವಾಗಲಿದೆ. 2050ರ ವೇಳೆಗೆ 3.6 ಕೋಟಿ ಜನರು ಜಲ ಪ್ರವಾಹದ ಅಪಾಯಕ್ಕೆ ಸಿಲುಕಲಿದ್ದಾರೆ. 2100ರ ವೇಳೆಗೆ ಇದು 4.4 ಕೋಟಿಗೆ ತಲುಪಲಿದೆ. 2.1 ಕೋಟಿ ಜನರು ಸಮುದ್ರ ಏರಿಳಿತದ ಮಧ್ಯೆ ವಾಸಿಸಬೇಕಾಗುತ್ತದೆ ಎಂದು ಅಂದಾಜಿಸಿದೆ.
ಪೀರ್ ರಿವ್ಯೂಡ್ ವೈಜ್ಞಾನಿಕ ಜರ್ನಲ್ ನೇಚರ್ ಕಮ್ಯುನಿಕೇಷನ್ಸ್‌ನಲ್ಲಿ ಕೋಸ್ಟಲ್ ಡಿಇಎಂ ಎಂಬ ಹೊಸ ಸಾಫ್ಟ್‌ವೇರ್ ಬಳಸಿಕೊಂಡು ಈ ಅಧ್ಯಯನ ನಡೆಸಲಾಗಿದೆ. ಪ್ರವಾಹದಿಂದ ಉಂಟಾಗುವ ಅಪಾಯಗಳ ಅಂದಾಜುಗಳನ್ನು ಶಟಲ್ ರಾಡಾರ್ ಟೊಪೊಗ್ರಫಿ ಮಿಷನ್ (ಎಸ್‌ಆರ್‌ಟಿಎಂ) ತೆಗೆದುಕೊಂಡ ಭೂಗೋಳದ ವಿವರವಾದ ನಕ್ಷೆಗಳನ್ನು ಅವಲಂಬಿಸಿ ಸಮೀಕ್ಷೆ ಕೈಗೊಂಡಿತ್ತು.
ಜಾಗತಿಕವಾಗಿ ವಾರ್ಷಿಕ ಸುಮಾರು 10.1 ಕೋಟಿ (110 ಮಿಲಿಯನ್) ಜನರು ಸಮುದ್ರ ಮಟ್ಟದ ಏರಿಕೆಯ ನಡುವೆ ಹಾಗೂ 25 ಕೋಟಿ (250 ಮಿಲಿಯನ್) ಜನರು ಪ್ರವಾಹಕ್ಕೆ ತುತ್ತಾಗಲಿದ್ದಾರೆ ಎಂದು ವಿಶ್ಲೇಷಿಸಿ ಎಚ್ಚರಿಕೆ ನೀಡಿದೆ. ಭಾರತಕ್ಕಿಂತ ಅತಿ ಹೆಚ್ಚು ಜನರು ಜಲ ಸಂಬಂಧಿತ ಅಪಾಯಕ್ಕೆ ಒಳಗಾಗುವುದು ಚೀನಾದಲ್ಲಿ ಎಂಬುದನ್ನು ಸಹ ಸಮೀಕ್ಷೆ ಹೇಳಿದೆ.