ಶ್ರೀನಗರ : 2 ಜಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಕಾಶ್ಮೀರದಲ್ಲಿ ಮರು ಸ್ಥಾಪಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿನ ಭದ್ರತಾ ಪರಿಸ್ಥಿತಿ ಮತ್ತು ಪೊಲೀಸ್ ಅಧಿಕಾರಿಗಳು ಸಲ್ಲಿಸಿದ ವರದಿಗಳು / ವಿವರಗಳನ್ನು ಆಧರಿಸಿ ಗೃಹ ಇಲಾಖೆಯು ಮೊಬೈಲ್ ಡೇಟಾ ಸೇವೆಗಳು ಮತ್ತು ಸ್ಥಿರ ರೇಖೆಯ ಮೂಲಕ ಇಂಟರ್ನೆಟ್ ಪ್ರವೇಶವನ್ನು ಪುನಾರಂಭಿಸಬೇಕೆಂದು ನಿರ್ದೇಶನ ನೀಡಿದ್ದರು.
ಹೀಗಾಗಿ ಕೆಲವು ನಿರ್ಬಂಧಗಳೊಂದಿಗೆ ಜಮ್ಮು ಮತ್ತು ಕಾಶ್ಮೀರದಾದ್ಯಂತ 2 ಜಿ ಮೊಬೈಲ್ ಇಂಟರ್ನೆಟ್ ಸೇವೆಗಳ ಆರಂಭಕ್ಕೆ ಅನುಮತಿ ಸಿಕ್ಕಿದೆ.
ಕಳೆದ ವರ್ಷ ಆಗಸ್ಟ್ 5 ರಂದು ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಕೇಂದ್ರ ಸರ್ಕಾರವು ಈ ಪ್ರದೇಶದಲ್ಲಿ ಅಂತರ್ಜಾಲವನ್ನು ಸ್ಥಗಿತಗೊಳಿಸಿತ್ತು.