ಮೇಷ
ಇಂದು ನೀವು ಆಧ್ಯಾತ್ಮಿಕತೆಯತ್ತ ಒಲವು ತೋರಲಿದ್ದೀರಿ. ಇದು ನಿಮಗೆ ಅನುಕೂಲವಾಗಬಹುದು. ಜೊತೆಗೆ ನಿಮ್ಮ ಹಿಂದಿನ ತಪ್ಪುಗಳ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಲು ಬಯಸಬಹುದು. ಅದರಲ್ಲಿ ನಿಮ್ಮ ನೆರೆಹೊರೆಯವರೊಂದಿಗೆ ಹೊಂದಿರುವ ಅಷ್ಟೇನೂ ಒಳ್ಳೆಯದಲ್ಲದ ಸಂಬಂಧಗಳೂ ಸೇರಿವೆ. ಇದು ನಿಮ್ಮ ಭವಿಷ್ಯದ ಸಾಧನೆಗೆ ತಳಹದಿ ನಿರ್ಮಿಸಲು ನೆರವಾಗುತ್ತದೆ.
ವೃಷಭ
ಒಂದು ಸಾಂಪ್ರದಾಯಿಕ ದಿನ ಅಸಾಧಾರಣ ಸಂಜೆಯಾಗಿ ಅರಳುವ ಬಲವಾದ ಸಾಧ್ಯತೆ ಇದೆ. ಆದರೆ, ಸಂಜೆ ಒತ್ತಡ ಮತ್ತು ಆತಂಕದಿಂದ ಕೂಡಿರುತ್ತದೆ. ಏನೇ ಆದರೂ, ನಿಮ್ಮ ಸಂಜೆ ವಿಶಿಷ್ಟವಾಗಿದ್ದು ಸಂಗಾತಿಯ ಮಮತೆ ಮತ್ತು ಆತ್ಮೀಯತೆಯಲ್ಲಿ ನಿರಾಳರಾಗುತ್ತೀರಿ.
ಮಿಥುನ
ನೀವು ನಿಮ್ಮ ಆಹಾರದ ಅಭ್ಯಾಸಗಳಿಗೆ ವಿಶೇಷ ಗಮನ ನೀಡಬೇಕಾದ ಸೂಚನೆಗಳಿವೆ. ನೀವು ಸಭೆಗೆ ಹೋಗಬಹುದು ಅಥವಾ ದಿನದ ನಂತರ ಹೊಸ ಕಾರ್ಯ ಪ್ರಾರಂಭಿಸಬಹುದು. ಕೆಲಸದಲ್ಲಿ, ನೀವು ಹಿರಿಯರಿಂದ ಬೆಂಬಲ ಮತ್ತು ಉತ್ತೇಜನ ಎರಡನ್ನೂ ಪಡೆಯುತ್ತೀರಿ.
ಕರ್ಕಾಟಕ
ದಿನದ ಮೊದಲಾರ್ಧದಲ್ಲಿ ನೀವು ಯಾವುದೋ ವಿಚಾರಕ್ಕೆ ಕೋಪಗೊಳ್ಳುವ ಸಾಧ್ಯತೆ ಇದೆ. ಇದರಿಂದ ಹೊರ ಬರಲು ಧ್ಯಾನ ಮಾಡಿ. ಕೆಲಸದಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ. ಪರಿಣಾಮಗಳು ನೀವು ಅನುಮಾನಿಸಿದ್ದಕ್ಕಿಂತ ತೀವ್ರವಾಗಿರುತ್ತವೆ.
ಸಿಂಹ
ನೀವು ಕಲಾತ್ಮಕತೆಯ ಕೃಪೆ ಹೊಂದಿದ್ದೀರಿ ಮತ್ತು ಇಂದು ನೀವು ನಿಮ್ಮ ಕೆಲಸವನ್ನು ಪ್ರದರ್ಶಿಸುತ್ತೀರಿ. ನೀವು ಸಂಪೂರ್ಣ ಉತ್ಸಾಹ ಮತ್ತು ಶಕ್ತಿಯೊಂದಿಗೆ ಬೀಗುತ್ತಿದ್ದೀರಿ. ನಿಮ್ಮ ಟೀಕಾಕಾರರನ್ನು ಸುಮ್ಮನಾಗಿಸಲು ನೀವು ಮಾಡುತ್ತಿರುವ ಕೆಲಸವನ್ನೇ ಉತ್ತಮವಾಗಿ ಮಾಡಿ
ಕನ್ಯಾ
ಸಾಧಾರಣ, ದಣಿವಿನ ಬೆಳಗಿನಿಂದ, ಈ ದಿನ ಕ್ರಮೇಣ ಅತ್ಯಂತ ಉತ್ಸಾಹದ ಸಂಜೆಯಾಗಿ ಬದಲಾಗುತ್ತದೆ. ಸಂಜೆ ವೇಳೆಗೆ ನೀವು ಅಡ್ಡಿ ಎದುರಿಸಿದರೂ ಒತ್ತಡದಿಂದ ಮುಕ್ತರಾದ ಭಾವನೆ ಹೊಂದುತ್ತೀರಿ. ಆದರೂ ಎಲ್ಲಾ ಒತ್ತಡ ಸಂಜೆ ವೇಳೆಗೆ ನಿಮ್ಮ ಪ್ರೀತಿಪಾತ್ರರ ಜೊತೆಯಲ್ಲಿರುವಾಗ ಕರಗಿ ಹೋಗುತ್ತದೆ.
ತುಲಾ
ಇಂದು ಯಶಸ್ಸಿಗೆ ನೇರ ದಾರಿ, ನಿಮ್ಮ ನೇರವಾದ ಪ್ರವೃತ್ತಿಯೇ ಅದಕ್ಕೆ ಕಾರಣ. ಕ್ಷುಲ್ಲಕ ವಿಷಯಗಳು ನಿಮಗೆ ದಿನದ ಪ್ರಾರಂಭದಲ್ಲಿ ದೊಡ್ಡ ರೀತಿಯಲ್ಲಿ ತೊಂದರೆ ಉಂಟು ಮಾಡಬಹುದು. ಆದರೆ ಅವುಗಳನ್ನು ಸರಿಪಡಿಸಿಕೊಳ್ಳಿ, ನಂತರ ನಿಮ್ಮ ಪ್ರಯಾಣ ಸರಾಗವಾಗುತ್ತದೆ. ವ್ಯಾಪಾರದಲ್ಲಿ ವಿವಿಧ ಮೂಲಗಳಿಂದ ಹಣದ ಹರಿವನ್ನು ನಿರೀಕ್ಷಿಸಿ. ನಿಮ್ಮದೇ ಸಾಮರ್ಥ್ಯಗಳು ಮತ್ತು ಪ್ರಯತ್ನಗಳು ಈ ಸಕಾರಾತ್ಮಕತೆಗೆ ಕಾರಣ.
ವೃಶ್ಚಿಕ
ಅತ್ಯಂತ ಘಟನೀಯ ದಿನ ನಿಮಗಾಗಿ ಕಾದಿದೆ. ದಿನದ ಮೊದಲಾರ್ಧ ದೈನಂದಿನ ಚಟುವಟಿಕೆಗಳಲ್ಲಿ ತುಂಬಿದ್ದು ನಿಮ್ಮ ಕ್ಷೇತ್ರದ ತೀವ್ರ ಸ್ಪರ್ಧೆಯ ಪೈಪೋಟಿ ಎದುರಿಸುತ್ತೀರಿ. ಆದರೆ, ನೀವು ದಿನದ ದ್ವಿತೀಯಾರ್ಧದಲ್ಲಿ ಆನಂದ ಹೊಂದಲಿದ್ದೀರಿ.
ಧನು
ನಗುತ್ತಲೇ ಎಲ್ಲವನ್ನೂ ಸ್ವಿಕರಿಸಿ. ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳು ನಿಮ್ಮ ಪರಿಣಿತಿ ಮತ್ತು ಕೌಶಲ್ಯಗಳಿಂದ ಅನುಕೂಲ ಪಡೆಯುತ್ತಾರೆ. ಸಂಜೆಯಲ್ಲಿ, ನಿಮ್ಮ ಪ್ರಿಯತಮೆಯೊಂದಿಗೆ ವಿಶೇಷ ಡೇಟ್ ಯೋಜಿಸಿರುವುದರಿಂದ ನೀವು ಇಡೀ ದಿನ ಸಂತೋಷವಾಗಿರುತ್ತೀರಿ.
ಮಕರ
ಮುಂದಿರುವ ಥ್ರಿಲ್ಲಿಂಗ್ ದಿನಕ್ಕಾಗಿ ಸಜ್ಜಾಗಿರಿ. ಸಾಕಷ್ಟು ಅನಿರೀಕ್ಷಿತ ಘಟನೆಗಳು ಸಂತೋಷ ತರುತ್ತವೆ, ಮತ್ತು ನೀವು ದಿಢೀರ್ ಎಂದು ಭಾವೋದ್ವೇಗದ ಸಂತೋಷ ಕಾಣುತ್ತೀರಿ. ಕೆಲಸದಲ್ಲಿ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ನಿಮ್ಮ ಬಹುತೇಕ ಸಮಯ ಕಬಳಿಸುತ್ತದೆ. ಹೊಸ ಉದ್ಯಮ ಅಥವಾ ವ್ಯಾಪಾರ ಸಂಸ್ಥೆ ಪ್ರಾರಂಭಿಸಲು ತಕ್ಕಷ್ಟು ಹಣಕಾಸಿನ ಬೆಂಬಲ ಪಡೆಯುವ ಸಾಧ್ಯತೆಗಳಿವೆ. ಈಗಿನ ಉದ್ಯಮವೂ ನಿರೀಕ್ಷೆ ಮೀರಿ ಬೆಳೆಯುತ್ತದೆ.
ಕುಂಭ
ಕೆಲಸದ ವಿಚಾರದಲ್ಲಿ ನೀವು ಇಂದು ಯಶಸ್ವಿ ಗಳಿಸಲಿದ್ದೀರಿ. ಸಂಜೆ ವೇಳೆಗೆ ನಿಮ್ಮ ಮೇಲೆ ಮನೆಯವರು ಕೋಪಗೊಳ್ಳಬಹುದು. ಆದರೆ ಎಲ್ಲವನ್ನೂ ತಾಳ್ಮೆಯಿಂದ ಕೇಳಿ ಸಮಸ್ಯೆ ಬಗೆಹರಿಸಿಕೊಳ್ಳಿ.
ಮೀನ
ಉತ್ಪಾದಕ ಮತ್ತು ಫಲಪ್ರದ ದಿನ ನಿಮಗಾಗಿ ಕಾದಿದೆ. ನೀವು ಹಳೆಯ ಮಿತ್ರರನ್ನು ಭೇಟಿಯಾಗಬಹುದು ಅಥವಾ ಹಳೆಯ ಪ್ರೇಮಿಯೊಂದಿಗೆ ಕಾಲ ಕಳೆಯಬಹುದು. ಸಾಮಾಜಿಕ ಸಭೆಗಳಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗುವುದನ್ನು ನಿರೀಕ್ಷಿಸಿರಿ. ಎಲ್ಲವನ್ನೂ ಆನಂದಿಸಿ.