ಜಮ್ಮು ಆ್ಯಂಡ್ ಕಾಶ್ಮೀರ: ಕಾಶ್ಮೀರದಲ್ಲಿ ಈ ಹಿಂದೆ ಪಟ್ಟಿಮಾಡಲಾದ ಉಗ್ರರ ಸಂಖ್ಯೆಯು 250ಕ್ಕಿಂತ ಕಡಿಮೆಯಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ .
ಈ ವರ್ಷ ಇಲ್ಲಿಯವರೆಗೆ ಕೇವಲ ಮೂವರು ಉಗ್ರರು ಅಂತಾರಾಷ್ಟ್ರೀಯ ಗಡಿ ರೇಖೆಯ ಮೂಲಕ ಕಣಿವೆ ಒಳ ನುಸುಳಿದ್ದಾರೆ ಎಂಬ ಮಾಹಿತಿ ಇದೆ. ನಾವು ಪಟ್ಟಿ ಮಾಡಲಾದ ಉಗ್ರರ ಸಂಖ್ಯೆ ಮೊದಲಿಗಿಂತಲೂ ಕಡಿಮೆಯಾಗಿದೆ. ಕಣಿವೆ ವ್ಯಾಪ್ತಿಯಲ್ಲಿ ಸುಮಾರು 240 ರಿಂದ 250 ಉಗ್ರರು ಇದ್ದಾರೆ ಎಂದು ಮಾಹಿತಿ ನೀಡಿದರು.
ಕಳೆದ ಎರಡು ತಿಂಗಳಲ್ಲಿ ಮೂವರು ಉಗ್ರರು ಒಳನುಸುಳಿದ್ದಾರೆ. ಅವರಲ್ಲಿ ಓರ್ವ ಜೆಎಂ ಉಗ್ರಗಾಮಿ ಆಗಿದ್ದು, ಇತ್ತೀಚೆಗೆ ನಡೆದ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿದೆ. 2020ರಲ್ಲಿ ಸುಮಾರು ಒಂದು ಡಜನ್ ಯಶಸ್ವಿ ಕಾರ್ಯಾಚರಣೆಗಳು ನಡೆದಿವೆ. ಇದರಲ್ಲಿ ಕಾಶ್ಮೀರ ಕಣಿವೆಯಲ್ಲಿ 10 ಮತ್ತು ಜಮ್ಮು ಪ್ರದೇಶದಲ್ಲಿ 2 ಕಾರ್ಯಾಚರಣೆಗಳಾಗಿವೆ. ಇಲ್ಲಿಯವರೆಗಿನ ಕಾರ್ಯಾಚರಣೆಗಳಲ್ಲಿ 25 ಭಯೋತ್ಪಾದಕರನ್ನು ಕೊಲ್ಲಲಾಗಿದ್ದು, 9 ಉಗ್ರರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.