ETV Bharat / bharat

5ರಲ್ಲಿ 3 ರೈಲ್ವೆ ಯೋಜನೆಗಳಿಗೆ ಬಜೆಟ್​ ಕೊರತೆ.. ಬೆಂಗಳೂರು 'ಸಬ್​ ಅರ್ಬನ್'​ ಕಥೆ ಏನಾಯ್ತು? - undefined

ರೈಲ್ವೆ ವಲಯದ ಹಲವು ಯೋಜನೆಗಳಿಗೆ ವೆಚ್ಚದ ಪ್ರಮಾಣ ಅಧಿಕವಾಗುತ್ತಿದೆ ಎಂಬುದನ್ನು ಕೇಂದ್ರ ಒಪ್ಪಿಕೊಂಡಿದೆ. ಘೋಷಣೆಯಾಗಿ ಎರಡೂವರೆ ವರ್ಷ ಕಳೆದರೂ ಇನ್ನು ಸಬ್ ಅರ್ಬನ್ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದೆ. ಹಣಕಾಸಿನ ಕೊರತೆ ಇದಕ್ಕೂ ತೊಡಕಾಗಬಹುದು ಎಂದ ಹೇಳಲಾಗುತ್ತಿದೆ.

ಸಾಂದರ್ಭಿಕ ಚಿತ್ರ
author img

By

Published : Apr 21, 2019, 9:50 PM IST

ನವದೆಹಲಿ: ರಾಷ್ಟ್ರದ ಬೃಹತ್ ಸಂಚಾರ ಸಾಧನ ಭಾರತೀಯ ರೈಲ್ವೆ ಮಂಡಳಿಯ 344 ಯೋಜನೆಗಳ ಪೈಕಿ ಸುಮಾರು 5ರಲ್ಲಿ 3 ಯೋಜನೆಗಳು ವಿವಿಧ ಕಾರಣಗಳಿಂದ ವೆಚ್ಚದ ಪ್ರಮಾಣ ಏರಿಕೆ ಆಗುತ್ತಿದ್ದು, ಇದು ಹಣಕಾಸಿನ ಕೊರತೆಗೆ ಕಾರಣವಾಗಿದೆ.

ಕೇಂದ್ರೀಯ ರೈಲ್ವೆ ಮಂಡಳಿಯು ರಾಜ್ಯಗಳ ಪಾಲುದಾರಿಕೆಯಲ್ಲಿ ಕೈಗೆತ್ತಿಕೊಂಡ ಯೋಜನೆಗಳು ಅನುಷ್ಠಾನಕ್ಕೆ ದೊಡ್ಡ ಪ್ರಮಾಣ ವೆಚ್ಚತಗಲುತ್ತಿದೆ. ಸುಮಾರು 205 ರೈಲ್ವೆ ಯೋಜನೆಗಳಿಗೆ ₹ 2.21 ಲಕ್ಷ ಕೋಟಿ ಅಗತ್ಯವಿದೆ ಎಂದು ಅಂಕಿಅಂಶ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ (ಎಂಒಎಸ್​ಪಿಐ) ತಿಳಿಸಿದೆ.

ಕೇಂದ್ರ ವಲಯದ ₹ 150 ಕೋಟಿಗೂ ಅಧಿಕ ವೆಚ್ಚದ ಯೋಜನೆಗಳಿಗೆ ಎಂಒಎಸ್​ಪಿಐ ಮಾನ್ಯ ಮಾಡಿದೆ. 2018ರ ವರೆಗೆ 205 ಯೋಜನೆಗಳಿಗೆ ₹ 1.68 ಲಕ್ಷ ಕೋಟಿ ವೆಚ್ಚವಾಗುತ್ತಿತ್ತು. ಈ ಯೋಜನೆ ಪೂರ್ಣಗೊಳ್ಳುವವರೆಗೂ ಇವುಗಳ ನಿರೀಕ್ಷಿತ ವೆಚ್ಚದ ಪ್ರಾಮಾಣ ₹ 3.89 ಲಕ್ಷ ಕೋಟಿ ಆಗಲಿದೆ ಎಂದು ಅಂದಾಜಿಸಲಾಗಿದೆ. ವೆಚ್ಚದ ಪ್ರಮಾಣವು ಶೇ.131.83ರಷ್ಟು ಏರಿಕೆ ಆಗಲಿದೆ ಎಂದು ಎಂಒಎಸ್​ಪಿಐ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

ಭಾರತೀಯ ರೈಲ್ವೆ ಮಂಡಳಿಯು 2018ರ ಡಿಸೆಂಬರ್​ ವೇಳೆಗ 367 ಯೋಜನೆಗಳನ್ನು ಗುರುತಿಸಿತ್ತು. ವಿಳಂಬ ಸೇರಿದಂತೆ ಇತರೆ ನೆಪದಿಂದ 94ಕ್ಕೂ ಅಧಿಕ ಯೋಜನೆಗಳನ್ನು ಮುಂದೂಡಿತ್ತು. ರೈಲ್ವೆ ಇಲಾಖೆಯು ವಿದ್ಯುದೀಕರಣ ಸಂಬಂಧಿಸಿದ ವಿದ್ಯುತ್​ ವಲಯದಲ್ಲಿ 95 ಯೋಜನೆಗಳಿಗೆ ಅನುಮೋದನೆ ನೀಡಿದೆ. ಇದರಲ್ಲಿ ಎರಡನೇ ಅತಿಹೆಚ್ಚಿನ ಅನುದಾನ ಕೇವಲ 40 ಯೋಜನೆಗಳು ನುಂಗುತ್ತಿದ್ದು, ಹೆಚ್ಚುವರಿಯಾಗಿ ₹ 63,334.88 ಕೋಟಿ ತಗಲುತ್ತಿದೆ.

ಈ 40 ಯೋಜನೆಗಳಿಗೆ ಆರಂಭದಲ್ಲಿ ₹ 1.78 ಲಕ್ಷ ಕೋಟಿ ತಗಲುತ್ತದೆ ಎಂದೇ ಅಂದಾಜಿಸಲಾಗಿತ್ತು. ಇದರ ಮೇಲೆ ಕಾಮಗಾರಿ ಕೈಗೆತ್ತಿಕೊಳ್ಳುವ ಚಿಂತನೆ ನಡೆಸಿತ್ತು. ಆದರೆ, ಈಗ ಈ ಮೊತ್ತ ₹ 2.36 ಲಕ್ಷ ಕೋಟಿಗೆ ಏರಿಕೆ ಆಗಲಿದೆ.

ಬೆಂಗಳೂರು ಉಪನಗರ (ಸಬ್ ಅರ್ಬನ್​) ರೈಲ್ವೆ ಯೋಜನೆ ಅನುಷ್ಠಾನಕ್ಕೆ ಹಲವು ಕಂಟಕಗಳು ಎದುರಾಗಿವೆ. ಯೋಜನೆಯ ಅಂದಾಜು ವೆಚ್ಚ ₹ 20 ಸಾವಿರ ಕೋಟಿ. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ, ಯೋಜನೆಯ ಮಾರ್ಗವನ್ನು ವಿಸ್ತರಿಸಿ ವೆಚ್ಚವನ್ನು ₹ 30 ಸಾವಿರ ಕೋಟಿಗೆ ಹೆಚ್ಚಿಸಬೇಕು ಎಂಬ ಬೇಡಿಕೆ ಇಟ್ಟಿದೆ ಎಂದು ರೈಲ್ವೆ ಅಧಿಕಾರಿಗಳು ಯಶವಂತಪುರದಲ್ಲಿನ ಅಭಿವೃದ್ಧಿ ಕಾಮಗಾರಿ ವೇಳೆ ತಿಳಿಸಿದ್ದರು.

ರೈಲ್ವೆ ವಲಯದ ಹಲವು ಯೋಜನೆಗಳಿಗೆ ವೆಚ್ಚದ ಪ್ರಮಾಣ ಅಧಿಕವಾಗುತ್ತಿದೆ ಎಂಬುದನ್ನು ಒಪ್ಪಿಕೊಂಡಿದೆ. ಘೋಷಣೆಯಾಗಿ ಎರಡೂವರೆ ವರ್ಷ ಕಳೆದರೂ ಇನ್ನೂ ಸಬ್ ಅರ್ಬನ್ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದೆ. ಹಣಕಾಸಿನ ಕೊರತೆ ಇದಕ್ಕೂ ತೊಡಕಾಗಬಹುದು ಎಂದು ಹೇಳಲಾಗುತ್ತಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.