ಹೈದರಾಬಾದ್: ಕಳೆದ ನಾಲ್ಕು ದಿನದಲ್ಲಿ ಹೈದರಾಬಾದ್ನಲ್ಲಿ ಬರೋಬ್ಬರಿ 203 ನಾಪತ್ತೆ ಪ್ರಕರಣ ದಾಖಲಾಗಿದ್ದು, ವಿವಿಧ ಪೊಲೀಸ್ ಠಾಣೆಗಳಲ್ಲಿ ಇಷ್ಟೊಂದು ಕೇಸ್ ದಾಖಲಾಗಿರುವುದು ಬಹಿರಂಗಗೊಂಡಿದೆ.
ನಿನ್ನೆ ಒಂದೇ ದಿನ 65 ನಾಪತ್ತೆ ಪ್ರಕರಣ ದಾಖಲಾಗಿವೆ. ಇದರ ಬಗ್ಗೆ ತೆಲಂಗಾಣ ಪೊಲೀಸ್ ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿ ಇದೆ. ನಿನ್ನೆ ಕಾಣೆಯಾಗಿರುವ ಪ್ರಕರಣಗಳಲ್ಲಿ 13 ಹೈದರಾಬಾದ್ನ ಕಮಿಷನರೇಟ್, ರಾಚಕೂಂಡದಲ್ಲಿ 8 ಹಾಗೂ 11 ಸೈಬರಾಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಕಳೆದ ವರ್ಷ 2 ಸಾವಿರಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದರು. ಇದೀಗ ಕಳೆದ ಎಂಟು ತಿಂಗಳಲ್ಲಿ 1,300 ಜನರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತೆಲಂಗಾಣ ಪೊಲೀಸರಿಗೆ ಅಕ್ಟೋಬರ್ 25 ರಂದು 65 ನಾಪತ್ತೆ ಪ್ರಕರಣ, 26 ರಂದು 63 ಮತ್ತು ಅಕ್ಟೋಬರ್ 27 ರಂದು 67 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಕುಟುಂಬ ಸದಸ್ಯರು ಹಾಗೂ ಪ್ರೇಮ ಸಂಬಂಧದಿಂದಾಗಿ ಮನೆ ತೊರೆದಿರುವ ಪ್ರಕರಣ ಹೆಚ್ಚಾಗಿವೆ. ಇದರಲ್ಲಿ ಕೆಲವೊಂದು ಪ್ರಕರಣಗಳಲ್ಲಿ ನಾಪತ್ತೆಯಾದವರು ಮನೆಗೆ ಬಂದಿದ್ದು, ಅದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎನ್ನಲಾಗಿದೆ.