ನವದೆಹಲಿ: 2021ರಲ್ಲಿ ನಡೆಯಲಿರುವ ಪಂಚರಾಜ್ಯ ಚುನಾವಣೆಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದ್ದು, ಅದಕ್ಕಾಗಿ ರಾಜ್ಯದ ಕೆಲ ಪ್ರಮುಖ ನಾಯಕರಿಗೆ ಹೆಚ್ಚಿನ ಜವಾಬ್ದಾರಿ ನೀಡಿ ಕಾಂಗ್ರೆಸ್ ಹೈಕಮಾಂಡ್ ಆದೇಶ ಹೊರಡಿಸಿದೆ.
ಈ ವರ್ಷ ಅಸ್ಸೋಂ, ಕೇರಳ, ತಮಿಳುನಾಡು, ಪುದುಚೇರಿ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಕೆಲ ಹಿರಿಯ ನಾಯಕರನ್ನು ಚುನಾವಣಾ ಪ್ರಚಾರ ನಿರ್ವಹಣೆ, ಸಮನ್ವಯ ಮೇಲ್ವಿಚಾರಣೆ ಹಾಗೂ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಪ್ರಮುಖವಾಗಿ ಕಾಂಗ್ರೆಸ್ನ ಭೂಪೇಶ್ ಬಾಗೆಲ್, ಮುಕುಲ್ ವಾಸ್ನಿಕ್, ಅಶೋಕ್ ಗೆಹ್ಲೋಟ್, ಬಿ.ಕೆ.ಹರಿಪ್ರಸಾದ್ ಸೇರಿದಂತೆ ಅನೇಕರು ಇದರಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
ಅಸ್ಸೋಂ ಚುನಾವಣೆ ಕಾಂಗ್ರೆಸ್ ವೀಕ್ಷಕರು: ಭೂಪೇಶ್ ಬಾಗೆಲ್, ಮುಕುಲ್ ವಾಸ್ನಿಕ್, ಶಕೀಲ್ ಅಹ್ಮದ್ ಖಾನ್
ಕೇರಳ ಚುನಾವಣೆ: ಅಶೋಕ್ ಗೆಹ್ಲೊಟ್, ಡಾ. ಜಿ.ಪರಮೇಶ್ವರ್
ತಮಿಳುನಾಡು &ಪುದುಚೇರಿ ಚುನಾವಣೆ: ವೀರಪ್ಪ ಮೊಯ್ಲಿ, ಪಾಲಂ ರಾಜು, ನೀತಿನ್ ರಾವತ್
ಪಶ್ಚಿಮ ಬಂಗಾಳ ಚುನಾವಣೆ: ಬಿ.ಕೆ.ಹರಿಪ್ರಸಾದ್, ಆಲ್ಮಗಿರ್, ವಿಜಯ್ ಇಂದಿರಾ ಸಿಂಗ್