ಪುಣೆ (ಮಹಾರಾಷ್ಟ್ರ): ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸುಮಾರು 200 ಜನರಿಗೆ ನಾಲ್ಕು ಗಂಟೆಗಳ ಕಾಲ ರಸ್ತೆಯಲ್ಲೇ ಕುಳಿತುಕೊಳ್ಳುವ ಶಿಕ್ಷೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
-
Maharashtra: Around 200 people were made to sit on the road at Swargate area in Pune for over 4 hours for defying #coronaviruslockdown norms, yesterday. pic.twitter.com/Z4Vt1tHgyk
— ANI (@ANI) April 16, 2020 " class="align-text-top noRightClick twitterSection" data="
">Maharashtra: Around 200 people were made to sit on the road at Swargate area in Pune for over 4 hours for defying #coronaviruslockdown norms, yesterday. pic.twitter.com/Z4Vt1tHgyk
— ANI (@ANI) April 16, 2020Maharashtra: Around 200 people were made to sit on the road at Swargate area in Pune for over 4 hours for defying #coronaviruslockdown norms, yesterday. pic.twitter.com/Z4Vt1tHgyk
— ANI (@ANI) April 16, 2020
'ಕೊರೊನಾ ವೈರಸ್ ಹರಡುವುದನ್ನು ನಿರ್ಬಂಧಿಸಲು ವಿಧಿಸಲಾಗಿದ್ದ ಲಾಕ್‌ಡೌನ್ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸುಮಾರು 200 ಜನರನ್ನು ಪುಣೆಯ ಸ್ವರ್ಗೇಟ್ ಪ್ರದೇಶದಲ್ಲಿ ನಾಲ್ಕು ಗಂಟೆಗಳ ಕಾಲ ರಸ್ತೆಯಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗಿದೆ' ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಶಬ್ಬೀರ್ ಸಯ್ಯದ್ ತಿಳಿಸಿದ್ದಾರೆ.
ಜನರಿಗೆ ಪರಿಸ್ಥಿತಿಯ ಗಂಭೀರತೆ ಮತ್ತು ಅವರಿಂದ ಎದುರಾಗಬಹುದಾದದ ಅಪಾಯವನ್ನು ಅರಿತುಕೊಳ್ಳುವುದಕ್ಕಾಗಿ ಇಂತಾ ಶಿಕ್ಷೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಪುಣೆಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಹೆಚ್ಚಳವಾಗಿದ್ದರೂ, ಕೆಲ ಜನರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಈವರೆಗೆ ಐಪಿಸಿ ಸೆಕ್ಷನ್ 188 ರ ಅಡಿಯಲ್ಲಿ ಸುಮಾರು 50 ಪ್ರಕರಣಗಳು ದಾಖಲಾಗಿದ್ದು, ಅವರ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.