ETV Bharat / bharat

20 ಸೆಂ.ಮೀ. ಉದ್ದದ ಚಾಕು ನುಂಗಿದ ವ್ಯಕ್ತಿ... ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದ ವೈದ್ಯರು! - 20 ಸೆ.ಮೀಟರ್​ ಉದ್ದದ ಚಾಕು

ಮಾನಸಿಕ ಅಸ್ವಸ್ಥನೋರ್ವ 20 ಸೆಂ.ಮೀಟರ್​ ಉದ್ದದ ಚಾಕು ನುಂಗಿ ಸಂಕಷ್ಟಕ್ಕೊಳಗಾಗಿದ್ದ ಘಟನೆ ನಡೆದಿದ್ದು, ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಅದನ್ನ ಹೊರ ತೆಗೆದಿದ್ದಾರೆ.

20-cm Knife Removed From Man
20-cm Knife Removed From Man
author img

By

Published : Jul 27, 2020, 4:11 PM IST

Updated : Jul 27, 2020, 4:23 PM IST

ನವದೆಹಲಿ: 20 ಸೆಂ.ಮೀಟರ್​ ಉದ್ದದ ತರಕಾರಿ ಕತ್ತರಿಸುವ ಚಾಕು ನುಂಗಿದ್ದ ವ್ಯಕ್ತಿಗೆ ಏಮ್ಸ್​ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ, ಚಾಕು ಹೊರಗಡೆ ತೆಗೆದಿರುವ ಘಟನೆ ನಡೆದಿದೆ.

20 ಸೆಂ.ಮೀ. ಉದ್ದದ ಚಾಕು ನುಂಗಿದ ವ್ಯಕ್ತಿ

ಗಾಂಜಾ ಸೇವನೆ ಮಾಡುವ ಚಟ ಬೆಳೆಸಿಕೊಂಡಿದ್ದ ಈ ವ್ಯಕ್ತಿ ಮೂಲತಃ ಹರಿಯಾಣದ ಪಾಲ್ವಾಲ್​ ಜಿಲ್ಲೆಯವನು. ಮಾನಸಿಕ ಅಸ್ವಸ್ಥನಾಗಿದ್ದ ಈ ವ್ಯಕ್ತಿ ಒಂದೂವರೆ ತಿಂಗಳ ಹಿಂದೆ ಚಾಕು ನುಂಗಿದ್ದ. ತಿಂಗಳ ಬಳಿಕ ಆತನಿಗೆ ಹೊಟ್ಟೆನೋವು ಮತ್ತು ಹಸಿವು ಆಗದೇ ಇರುವಂತಹ ತೊಂದರೆ ಶುರುವಾಗಿದೆ. ಹೀಗಾಗಿ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಹೊಟ್ಟೆಯ ಏಕ್ಸ್​ರೇ ಮಾಡಿದಾಗ ಚಾಕು ಇರುವ ವಿಷಯ ಗೊತ್ತಾಗಿದೆ.

ಏಮ್ಸ್​ ಆಸ್ಪತ್ರೆಯ ಎನ್.​ಆರ್.ದಾಸ್​ ನೇತೃತ್ವದ ವೈದರ ತಂಡ ಶ್ವಾಸಕೋಶ, ರಕ್ತನಾಳ ಹಾಗೂ ಲಿವರ್​ಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ, ಚಾಕು ಹೊರ ತೆಗೆದಿದ್ದಾರೆ. ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಅವರು ಹೇಳಿದ್ದು, ಇದೀಗ ಆತ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದ್ದಾರೆ.

Last Updated : Jul 27, 2020, 4:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.