ಶ್ರೀನಗರ: ಭಾರತದ ಮುಕುಟಮಣಿ ಜಮ್ಮು ಕಾಶ್ಮೀರ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಭದ್ರತೆ ಸಡಲಿಕೆ ಬಳಿಕ ಜನತೆ ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಪ್ರಸ್ತುತ ಕಾಶ್ಮೀರದ ಪರಿಸ್ಥಿತಿಯನ್ನು ಶಾಂತಗೊಳಿಸಲು ಇಬ್ಬರು ಮಹಿಳಾಮಣಿಗಳು ಮೇಲುಸ್ತುವಾರಿ ವಹಿಸಿಕೊಂಡಿದ್ದು, ಮಹತ್ವದ ಸ್ಥಾನದಲ್ಲಿರುವ ಆ ದಿಟ್ಟ ಮಹಿಳೆಯ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ...
ಡಾ. ಸೈಯದ್ ಸೆಹರಿಶ್ ಅಸ್ಗರ್
2013ನೇ ಐಎಎಸ್ ಬ್ಯಾಚ್ನ ಡಾ. ಸೈಯದ್ ಸೆಹರಿಶ್ ಅಸ್ಗರ್ ಕಾಶ್ಮೀರಕ್ಕೆ ನಿಯೋಜನೆಗೊಂಡಿದ್ದು, ಅಲ್ಲಿ ಜನಸಂಪರ್ಕದಲ್ಲಿದ್ದು ಸರ್ಕಾರದ ನೂತನ ಯೋಜನೆಗಳನ್ನು ಜನತೆಗೆ ತಿಳಿಸುವ ಮತ್ತು ಅರ್ಥೈಸುವ ಕಾರ್ಯ ಮಾಡಲಿದ್ದಾರೆ.
ಆರ್ಟಿಕಲ್ 370 ವಿಧಿವಶದ ಬಳಿಕ ಕಾಶ್ಮೀರದಲ್ಲಿ ಸೈಟ್ ಬೆಲೆ ಎಷ್ಟಾಗಿದೆ ಗೊತ್ತೆ?
ಡಾ. ಸೈಯದ್ ಸೆಹರಿಶ್ ಅಸ್ಗರ್ ಮಾಹಿತಿ ನಿರ್ದೇಶಕರಾಗಿ ನಿಯುಕ್ತರಾಗಿದ್ದಾರೆ. ಎಂಬಿಬಿಎಸ್ ಶಿಕ್ಷಣವನ್ನು ಅರ್ಧಕ್ಕೆ ತೊರೆದು ಯುಪಿಎಸ್ಸಿ ಪರೀಕ್ಷೆ ಬರೆದು ಇದೀಗ ಕಾಶ್ಮೀರದಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಒಂದು ವರ್ಷದ ಮಗುವಿನ ತಾಯಿಯಾಗಿರುವ ಅಸ್ಗರ್, ಸದ್ಯ ಕೆಲಸ ಸವಾಲಿನಿಂದ ಕೂಡಿದ್ದು ಇದಕ್ಕೆ ಭಾವನಾತ್ಮಕ ಬೆಂಬಲದ ಅಗತ್ಯವವಿದೆ ಎಂದಿದ್ದಾರೆ.
ಪಿ.ಕೆ.ನಿತ್ಯಾ
2016ನೇ ಬ್ಯಾಚ್ನ ಐಪಿಎಸ್ ಆಧಿಕಾರಿಯಾಗಿರುವ ಪಿ.ಕೆ.ನಿತ್ಯಾ ಶ್ರೀನಗರಕ್ಕೆ ನಿಯುಕ್ತಿಗೊಂಡಿದ್ದು, ರಾಮ್ ಮುನ್ಶಿ ಬಾಗ್ ಹಾಗೂ ಹರ್ವಾಣ್ ದಗ್ಚಿ ಗ್ರಾಮದ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಈ 40 ಕಿ.ಮೀ ವ್ಯಾಪ್ತಿಯ ಪ್ರದೇಶ ಅತ್ಯಂತ ಸೂಕ್ಷ್ಮವಾಗಿದ್ದು, ಈ ಸರಹದ್ದಿನಲ್ಲಿ ಪ್ರಸಿದ್ಧ ದಾಲ್ ಸರೋವರ ಹಾಗೂ ರಾಜ್ಯಪಾಲರ ನಿವಾಸ ಸಹ ಇದೆ. ಜೊತೆಗೆ ಖ್ಯಾತನಾಮರನ್ನು ಗೃಹಬಂಧನದಲ್ಲಿರಿಸಿದ ಸ್ಥಳವೂ ಇದೇ ವ್ಯಾಪ್ತಿಯಲ್ಲಿದೆ.
ಆರ್ಟಿಕಲ್ 370 ರದ್ದು ಭಾರತದ ಆಂತರಿಕ ವಿಚಾರ... ಚೀನಾಗೆ ಸೂಕ್ಷ್ಮವಾಗೇ ಬಿಸಿ ಮುಟ್ಟಿಸಿದ ಭಾರತ!
ಛತ್ತೀಸ್ಗಢ ಮೂಲದ 28 ವರ್ಷದ ನಿತ್ಯಾ ಸದ್ಯದ ಕೆಲಸವನ್ನು ಸವಾಲಾಗಿ ಸ್ವೀಕರಿಸಿದ್ದು, ಈ ಹಿಂದೆ ಸಿಮೆಂಟ್ ಕಂಪೆನಿಯಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಪ್ರಸ್ತುತ ಕಾಶ್ಮೀರಕ್ಕೆ ಇಬ್ಬರೇ ಮಹಿಳೆಯರನ್ನು( ಅಸ್ಗರ್ ಹಾಗೂ ನಿತ್ಯಾ) ನಿಯುಕ್ತಿ ಮಾಡಲಾಗಿದ್ದು ಇನ್ನಿತರ ಉನ್ನತ ಮಟ್ಟದ ಮಹಿಳಾ ಅಧಿಕಾರಿಗಳನ್ನು ಜಮ್ಮು ಮತ್ತು ಲಡಾಖ್ ಪ್ರಾಂತ್ಯಕ್ಕೆ ಕಳುಹಿಸಲಾಗಿದೆ.