ಬಾಗ್ದಾದ್: ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿರುವ ಅಮೆರಿಕ ಸೇನೆ ಬೀಡು ಬಿಟ್ಟಿರುವ ಅಲ್-ಬಲಾದ್ ವಾಯುನೆಲೆ ಮೇಲೆ ಇರಾನ್ ಎರಡು ರಾಕೆಟ್ ದಾಳಿ ನಡೆಸಿದ್ದಾಗಿ ತಿಳಿದು ಬಂದಿದೆ.
-
Two rockets hit Iraq base where US troops deployed, security sources say: AFP News Agency https://t.co/1dwvBM9e1y
— ANI (@ANI) January 4, 2020 " class="align-text-top noRightClick twitterSection" data="
">Two rockets hit Iraq base where US troops deployed, security sources say: AFP News Agency https://t.co/1dwvBM9e1y
— ANI (@ANI) January 4, 2020Two rockets hit Iraq base where US troops deployed, security sources say: AFP News Agency https://t.co/1dwvBM9e1y
— ANI (@ANI) January 4, 2020
ಅಮೆರಿಕ ವಾಯುಪಡೆಯ ದಾಳಿಗೆ ಇರಾನ್ನ ಸೇನಾ ಮುಖ್ಯಸ್ಥ ಜನರಲ್ ಖಾಸಿಂ ಸೊಲೇಮನಿ ಸಾವನ್ನಪ್ಪಿದ ಬಳಿಕ ಯುದ್ಧ ಭೀತಿ ಎದುರಾಗಿದ್ದು, ಇಂದು ಬೆಳಗ್ಗೆ ಸಹ ಇರಾಕ್ ಮೇಲೆ ಅಮೆರಿಕ ಸೇನೆ ವಾಯುದಾಳಿ ನಡೆಸಿ, ಕೆಲವರ ಸಾವಿಗೆ ಕಾರಣವಾಗಿದೆ. ಇದೀಗ ಯುಎಸ್ ಸೇನೆ ತಂಗಿದ್ದ ಸ್ಥಳದಲ್ಲೇ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
-
Qassem Soleimani was responsible for killing at least 603 U.S. service members and maiming thousands more in Iraq. 17% of U.S. personnel deaths in Iraq between 2003 and 2011 can be attributed to this terrorist and his IRGC-Qods Force.
— Department of State (@StateDept) January 4, 2020 " class="align-text-top noRightClick twitterSection" data="
">Qassem Soleimani was responsible for killing at least 603 U.S. service members and maiming thousands more in Iraq. 17% of U.S. personnel deaths in Iraq between 2003 and 2011 can be attributed to this terrorist and his IRGC-Qods Force.
— Department of State (@StateDept) January 4, 2020Qassem Soleimani was responsible for killing at least 603 U.S. service members and maiming thousands more in Iraq. 17% of U.S. personnel deaths in Iraq between 2003 and 2011 can be attributed to this terrorist and his IRGC-Qods Force.
— Department of State (@StateDept) January 4, 2020
ಯುಎಸ್ ಸೇನೆ ಕಳೆದ ಶುಕ್ರವಾರ ಇರಾಕ್ ರಾಜಧಾನಿ ಬಾಗ್ದಾದ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದವು. ಈ ವೇಳೆ ಕಾರಿನಲ್ಲಿದ್ದ ಇರಾನ್ ಸೇನಾ ಮುಖ್ಯಸ್ಥ ಸೊಲೇಮನಿ ಹಾಗೂ ಸೇನೆಯ ಉಪ ಮುಖ್ಯಸ್ಥ ಅಬು ಮೆಹದಿ ಅಲ್ ಮುಹಂದಿಸ್ ಇಬ್ಬರೂ ಬಲಿಯಾಗಿದ್ದರು. ಬಾಗ್ದಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿತ್ತು. ಇದೀಗ ಅದು ಮತ್ತೊಂದು ರೂಪ ಪಡೆದುಕೊಂಡಿದೆ.