ಮುಂಬೈ: ಕರ್ನಾಟಕದಲ್ಲಿ ನಡೆದಿದ್ದ ರೆಸಾರ್ಟ್ ರಾಜಕಾರಣ ಸದ್ಯ ಮಹಾರಾಷ್ಟ್ರದಲ್ಲೂ ನಡೆಯುತ್ತಿದ್ದು, ಹಲವು ನಾಟಕೀಯ ಬೆಳವಣಿಗೆಳಿಗೆ ಸಾಕ್ಷಿಯಾಗುತ್ತಿದೆ.
ಭಾನುವಾರ ನಾಪತ್ತೆಯಾಗಿದ್ದ ನಾಲ್ವರು ಎನ್ಸಿಪಿ ಶಾಸಕರ ಪೈಕಿ ಇಬ್ಬರು ಭಾನುವಾರ ತಡರಾತ್ರಿ ಮುಂಬೈನ ಹಯಾತ್ ಹೋಟೆಲ್ ಸೇರಿದ್ದಾರೆ.
ಎನ್ಸಿಪಿ ಶಾಸಕರಾದ ದೌಲತ್ ದರೋದ ಹಾಗೂ ಅನಿಲ್ ಪಾಟೀಲ್ ಸರ್ಕಾರ ರಚನೆ ವೇಳೆ ಗುರುಗ್ರಾಮದ ಹೋಟೆಲ್ನಲ್ಲಿ ತಂಗಿದ್ದರು. ಸದ್ಯ ಎನ್ಸಿಪಿ ಯುವ ಘಟಕದ ಅಧ್ಯಕ್ಷ ಧೀರಜ್ ಶರ್ಮಾ ಹಾಗೂ ನ್ಯಾಷನಾಲಿಸ್ಟ್ ಸ್ಟೂಡೆಂಟ್ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ದೂಹನ್ ಜೊತೆಗೆ ಹಯಾತ್ ಹೋಟೆಲ್ಗೆ ಬಂದಿದ್ದಾರೆ.
-
Mumbai: NCP MLAs Anil Patil & Daulat Daroda (in yellow shirts), at Hotel Hyatt where other MLAs of the party are lodged. They were brought from Delhi by Sonia Doohan, President of NCP's Nationalist Student Congress & Dheeraj Sharma, President of NCP's Nationalist Youth Congress. https://t.co/ndBmOmGW8F pic.twitter.com/bUkzqsrdzj
— ANI (@ANI) November 25, 2019 " class="align-text-top noRightClick twitterSection" data="
">Mumbai: NCP MLAs Anil Patil & Daulat Daroda (in yellow shirts), at Hotel Hyatt where other MLAs of the party are lodged. They were brought from Delhi by Sonia Doohan, President of NCP's Nationalist Student Congress & Dheeraj Sharma, President of NCP's Nationalist Youth Congress. https://t.co/ndBmOmGW8F pic.twitter.com/bUkzqsrdzj
— ANI (@ANI) November 25, 2019Mumbai: NCP MLAs Anil Patil & Daulat Daroda (in yellow shirts), at Hotel Hyatt where other MLAs of the party are lodged. They were brought from Delhi by Sonia Doohan, President of NCP's Nationalist Student Congress & Dheeraj Sharma, President of NCP's Nationalist Youth Congress. https://t.co/ndBmOmGW8F pic.twitter.com/bUkzqsrdzj
— ANI (@ANI) November 25, 2019
ಎನ್ಸಿಪಿ ಶಾಸಕ ನಿತಿನ್ ಪವಾರ್ ಭಾನುವಾರವೇ ತಮ್ಮ ಪಕ್ಷದ ಉಳಿದ ಶಾಸಕರನ್ನು ಕೂಡಿಕೊಂಡಿದ್ದಾರೆ. ಇನ್ನೋರ್ವ ಶಾಸಕ ನರ್ಹರಿ ಝಿರ್ವಾಲ್ ಸದ್ಯ ದೆಹಲಿಯಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಎನ್ಸಿಪಿ ಮೂಲಗಳು ಹೇಳಿವೆ.
ನಮ್ಮ ಪಕ್ಷದ 52 ಶಾಸಕ ಸದ್ಯ ನಮ್ಮೊಂದಿಗಿದ್ದಾರೆ, ಒಬ್ಬರು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಎನ್ಸಿಪಿ ನಾಯಕ ನವಾಬ್ ಮಲಿಕ್ ಹೇಳಿಕೆ ನೀಡಿದ್ದಾರೆ.
ಶಾಸಕರ ಕುದುರೆ ವ್ಯಾಪಾರದ ಭೀತಿಯಲ್ಲಿ ಭಾನುವಾರ ಎನ್ಸಿಪಿ ತನ್ನೆಲ್ಲಾ ಶಾಸಕರನ್ನು ಮುಂಬೈನ ಹಯಾತ್ ಹೋಟೆಲ್ಗೆ ಶಿಫ್ಟ್ ಮಾಡಿಸಿತ್ತು.