ETV Bharat / bharat

ಕೋವಿಡ್​​ ವಿರುದ್ಧ ಭಾರತದ ಮತ್ತೆರಡು ಲಸಿಕೆ ಮನುಷ್ಯರ ಮೇಲೆ ಪ್ರಯೋಗ: ICMR - ಮಾನವರ ಪ್ರಯೋಗ

ಕೊರೊನಾ ವೈರಾಣು ವಿರುದ್ಧದ ಹೋರಾಟ ಮುಂದುವರೆದಿದೆ. ಈ ರೋಗಕ್ಕೆ ಇಲ್ಲಿಯವರೆಗೆ ಯಾವುದೇ ರೀತಿಯ ಔಷಧ ಕಂಡು ಹಿಡಿಯಲಾಗಿಲ್ಲ. ಆದರೆ ಪ್ರಯೋಗಗಳು ಎಡೆಬಿಡದೆ ವಿಶ್ವದಾದ್ಯಂತ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಮತ್ತೆರಡು ಲಸಿಕೆಗಳನ್ನು ಮನುಷ್ಯರ ಮೇಲೆ ಪ್ರಯೋಗ ಮಾಡಲಾಗುತ್ತಿದೆ.

ICMR
ICMR
author img

By

Published : Jul 14, 2020, 5:26 PM IST

ನವದೆಹಲಿ: ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿದೆ. ಇಲ್ಲಿಯವರೆಗೆ ಯಾವುದೇ ರೀತಿಯ ಲಸಿಕೆ ಕೋವಿಡ್​-19ಗಾಗಿ ಕಂಡು ಹಿಡಿದಿಲ್ಲ. ಆದರೆ ಅನೇಕ ಔಷಧಿಗಳ ಪ್ರಯೋಗ ನಡೆಸಲಾಗುತ್ತಿದ್ದು, ಐಸಿಎಂಆರ್​ ತಿಳಿಸಿರುವ ಪ್ರಕಾರ, ಇದೀಗ ಮತ್ತೆರಡು ಲಸಿಕೆಗಳ ಮಾನವ ಪ್ರಯೋಗಕ್ಕೆ ಅನುಮತಿ ನೀಡಲಾಗಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)​ ನಿರ್ದೇಶಕ​​​ ಬಲರಾಂ ಭಾರ್ಗವ್​ ಹೇಳುವಂತೆ, ಭಾರತದ ಎರಡು ಲಸಿಕೆಗಳು ಯಶಸ್ವಿಯಾಗಿ ಸಂಶೋಧನೆಯಾಗಿದ್ದು, ಈಗಾಗಲೇ ಇಲಿ, ಮೊಲದ ಮೇಲೆ ಪ್ರಯೋಗ ನಡೆಸಲಾಗಿದೆ. ಇದರ ಡೇಟಾವನ್ನು ಸಲ್ಲಿಸಲಾಗಿದ್ದು ಇದರ ಮಾನವ ಪ್ರಯೋಗ ಪ್ರಾರಂಭಿಸಲು ಅನುಮತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರಷ್ಯಾ ಕೂಡ ಕೋವಿಡ್​ ವಿರುದ್ಧ ಲಸಿಕೆ ಸಂಶೋಧನೆ ಮಾಡುತ್ತಿದೆ. ಆ ದೇಶ ಈ ನಿಟ್ಟಿನಲ್ಲಿ ಆರಂಭಿಕ ಯಶ ಕಂಡಿದೆ ಎಂದು ಭಾರ್ಗವ್​ ವಿವರಿಸಿದರು.

ಕೋವಿಡ್​-19 ಕೆಮ್ಮಿದಾಗ, ಸೀನಿದಾಗ ಚಿಕ್ಕ ಚಿಕ್ಕ ಮೈಕ್ರೋ ಡ್ರಾಪ್ಲೆಟ್​​ಗಳೊಂದಿಗೆ (5 ಮೈಕ್ರಾನ್​ಗಳಿಗಿಂತ ಕಡಿಮೆ ಗಾತ್ರ) ಹಾಗೂ ಕೆಲವೊಮ್ಮೆ ವೈರಾಣು ಗಾಳಿಯಲ್ಲಿ ಹರಡುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದು, ಮಾಸ್ಕ್​ ಹಾಕಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಅವರು ಎಚ್ಚರಿಸಿದ್ದಾರೆ.

ಈಗಾಗಲೇ ಭಾರತದಲ್ಲಿ ಕೋವಿಡ್​ ವಿರುದ್ಧ ದೇಶೀಯ ಲಸಿಕೆ ಕೊವಾಕ್ಸಿನ್​ ಮೊದಲ ಹಾಗೂ ಎರಡನೇ ಹಂತದ ಮಾನವ ಪ್ರಯೋಗ ಕಾರ್ಯಕ್ಕೆ ಹೈದರಾಬಾದ್ ಮೂಲದ ಲಸಿಕೆ ತಯಾರಿಕ ಕಂಪನಿ ಭಾರತ್ ಬಯೋಟೆಕ್‌ಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ( ಡಿಸಿಜಿಐ) ಅನುಮೋದನೆ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.