ನವದೆಹಲಿ: ದೇಶದಲ್ಲಿ ಮೇ. 12ರಿಂದ ಕೆಲ ಆಯ್ದ ನಗರಗಳಿಗೆ ವಿಶೇಷ ರೈಲು ಸಂಚಾರ ಆರಂಭಗೊಂಡಿದ್ದು, ಆನ್ಲೈನ್ನಲ್ಲಿ ಮಾತ್ರ ಟಿಕೆಟ್ ಬುಕ್ಕಿಂಗ್ ಮಾಡಲು ಅನುಮತಿ ನೀಡಲಾಗಿದೆ. ಇದೀಗ ರೈಲ್ವೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಕೇವಲ ಎರಡು ದಿನದಲ್ಲಿ ಐಆರ್ಸಿಟಿಸಿ ವೆಬ್ಸೈಟ್ ಮೂಲಕ 2.34 ಲಕ್ಷ ಟಿಕೆಟ್ ಬುಕ್ಕಿಂಗ್ ಆಗಿವೆ ಎಂದು ತಿಳಿಸಿದೆ.
ಈಗಾಗಲೇ ಜೂನ್ 30ರವರೆಗೆ ಕಾಯ್ದಿರಿಸಲಾಗಿದ್ದ ಎಲ್ಲ ಸಾಮಾನ್ಯ ರೈಲ್ವೆ ಟಿಕೆಟ್ ರದ್ದುಗೊಳಿಸಿ ರೈಲ್ವೆ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಇದರ ಮಧ್ಯೆ 15 ನಗರಗಳಿಗೆ ವಿಶೇಷ 15 ರೈಲು ಸಂಚಾರ ಆರಂಭಗೊಂಡಿದ್ದು, ಮುಂದಿನ ಏಳು ದಿನಕ್ಕಾಗಿ ಎಲ್ಲ ಟಿಕೆಟ್ ಬುಕ್ ಆಗಿವೆ ಎಂದಿರುವ ರೈಲ್ವೆ ಇಲಾಖೆ ಇದರಿಂದ ಒಟ್ಟು 45,30 ಕೋಟಿ ರೂ ಜಮೆಯಾಗಿದೆ ಎಂದು ತಿಳಿಸಿದೆ.
ಇನ್ನು ಮೇ. 22ರ ನಂತರ ಚಲಿಸುವ ವಿಶೇಷ ಎಸಿ ರೈಲುಗಳ ವೇಟಿಂಗ್ ಲಿಸ್ಟ್ ಹೊಂದಿರುತ್ತವೆ ಎಂದು ತಿಳಿಸಿರುವ ರೈಲ್ವೆ ಇಲಾಖೆ ಎಸಿ-3 ಶ್ರೇಣಿಗೆ 100, ಎಸಿ-2 ಶ್ರೇಣಿಗೆ 50 ಹಾಗೂ ಸ್ಲೀಪರ್ ಕೋಚ್ಗೆ 200 ಸೀಟುಗಳನ್ನ ವೇಟಿಂಗ್ ಲಿಸ್ಟ್ ತಯಾರಿಸಲಾಗುವುದು ಎಂದು ತಿಳಿಸಿದೆ. ದೇಶದಲ್ಲಿ ಇದೀಗ ವಿಶೇಷ ಹಾಗೂ ಶ್ರಮಿಕ್ ರೈಲುಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ.