ದೇವಾಸ್ (ಮಧ್ಯಪ್ರದೇಶ): ಅಕ್ರಮ ಮರಳು ಮಾಫಿಯಾ ಮೇಲೆ ದಾಳಿ ನಡೆಸಿದ ವೇಳೆ ಕನ್ನೋಡ್ ಸಬ್ ಡಿವಿಷನಲ್ ಆಫೀಸಿನ ಚಾಲಕ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ ಘಟನೆ ದೇವಾಸ್ನಲ್ಲಿ ನಡೆದಿದೆ.
ಘಟನೆಯಲ್ಲಿ ಚಾಲಕ ಹಿಮಾಂಶುಗೆ ತೀವ್ರ ಗಾಯಗಳಾಗಿದ್ದು, ಪೊಲೀಸ್ ಸಿಬ್ಬಂದಿಗೂ ಕೂಡಾ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವೇಳೆ, ಎಸ್ಡಿಒಪಿ ಬ್ರಿಜೇಶ್ ಕುಶ್ವಾಹಾ ಅಪಾಯದಿಂದ ಪಾರಾಗಿದ್ದಾರೆ.
ಕನ್ನೋಡ್ ಎಸ್ಡಿಒಪಿ ಬ್ರಿಜೇಶ್ ಕುಶ್ವಾಹ ನೇತೃತ್ವದಲ್ಲಿ ತಂಡವೊಂದು ದೇವಾಸ್ ಜಿಲ್ಲೆಯ ಸತ್ವಾಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮರಳು ದಂಧೆಯೊಂದನ್ನು ತಡೆಯಲು ಸ್ಥಳಕ್ಕೆ ಭೇಟಿ ನೀಡಿತ್ತು. ಈ ವೇಳೆ, ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ.
ನಾವು ಹಲ್ಲೆ ಮಾಡಿದ ಐದು ಮಂದಿಯನ್ನು ಗುರುತಿಸಿದ್ದೇವೆ. ಎಲ್ಲರ ಮೇಲೆಯೂ ಎಫ್ಐಆರ್ ದಾಖಲಾಗಿದೆ. ಅವರನ್ನು ಶೀಘ್ರವಾಗಿ ಬಂಧಿಸಲಾಗುತ್ತದೆ ಎಂದು ಅಡಿಷನಲ್ ಎಸ್ಪಿ ಸೂರ್ಯಕಾಂತ್ ಶರ್ಮ ಸ್ಪಷ್ಟಪಡಿಸಿದ್ದಾರೆ.