ETV Bharat / bharat

ಲಂಡನ್‌ನಿಂದ ಮುಂಬೈಗೆ ಬಂದಿಳಿದ 326 ಮಂದಿ; ರೋಗ ಲಕ್ಷಣವಿರುವ ಜನರಿಗೆ ಕ್ವಾರಂಟೈನ್‌

ರೋಗಲಕ್ಷಣಗಳೊಂದಿಗೆ ಆಗಮಿಸುವ ಪ್ರಯಾಣಿಕರನ್ನು ಪ್ರತ್ಯೇಕ ಕೇಂದ್ರಗಳಿಗೆ ಸ್ಥಳಾಂತರಿಸಲಾಗುವುದು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

air india
ವಂದೇ ಭಾರತ್​ ಮಿಷನ್
author img

By

Published : May 10, 2020, 1:10 PM IST

ಮುಂಬೈ: ಕೊರೊನಾದಿಂದ ಬ್ರಿಟನ್​ನಲ್ಲಿ ಸಿಲುಕಿರುವ 326 ಭಾರತೀಯರ ಮೊದಲ ಬ್ಯಾಚ್ ಇಂದು ಮುಂಜಾನೆ ಲಂಡನ್‌ನಿಂದ ಭಾರತಕ್ಕೆ ಬಂದಿಳಿದಿದೆ.

ಶನಿವಾರ ಲಂಡನ್‌ನಿಂದ ನಿರ್ಗಮಿಸಿದ ವಿಶೇಷ ವಿಮಾನ ಎಐ 130, ಬೋಯಿಂಗ್ 777 ವಿಮಾನವು ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಸಿಎಸ್‌ಎಂಐಎ) ರಾತ್ರಿ 1.30 ರ ಸುಮಾರಿಗೆ 326 ಭಾರತೀಯರೊಂದಿಗೆ ಬಂದಿಳಿದಿದೆ.

ಮೊದಲನೇ ಫ್ಲೈಟ್ 2 ಮುಂಬೈನಲ್ಲಿ ಇಳಿದಿದೆ. ಪ್ರಯಾಣಿಕರೊಂದಿಗೆ ಸಿಬ್ಬಂದಿಯ ಸಂವಹನ ಕಡಿಮೆಯಿದೆ. ಪ್ರಯಾಣಿಕರಿಗೆ ತಿಂಡಿ ಮತ್ತು ಊಟದೊಂದಿಗೆ 2 ರಕ್ಷಣಾತ್ಮಕ ಕಿಟ್ ನೀಡಲಾಗಿದೆ ಎಂದು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಟ್ವೀಟ್ ಮಾಡಿದ್ದಾರೆ.

ಯುಕೆಯಿಂದ ಸುರಕ್ಷಿತವಾಗಿ ಮುಂಬೈ ತಲುಪಿದ್ದೇವೆ. @Airindiain @HCI_London, @NISAU_UK, @MEAIndia ಗೆ ತುಂಬಾ ಧನ್ಯವಾದಗಳು ಎಂದು ಮತ್ತೋರ್ವ ವ್ಯಕ್ತಿ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಮುಂಬೈನಲ್ಲಿ ವಾಸಿಸುವ ಕೋವಿಡ್​ ಲಕ್ಷಣರಹಿತ ಪ್ರಯಾಣಿಕರನ್ನು ಕ್ವಾರಂಟೈನ್ ಸೌಲಭ್ಯ ನೀಡಿರುವಂತಹ ಹೋಟೆಲ್‌ಗಳಲ್ಲಿ ಹಾಗೂ ಇತರೆಡೆ ಸ್ಥಳಾಂತರಿಸಲಾಗುವುದು. ಆದರೆ ನಗರದ ಹೊರಗಿನವರನ್ನು ಆಯಾ ಜಿಲ್ಲಾ ಕೇಂದ್ರಗಳಿಗೆ ಸಾಗಿಸಲಾಗುವುದು ಎಂದು ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.