ETV Bharat / bharat

ಲಾಕ್​​​ಡೌನ್​ನಿಂದ ಭಾರತದಲ್ಲೇ ಸಿಲುಕಿದ್ದ 193 ಪಾಕ್​ ಪ್ರಜೆಗಳು ಮರಳಿ ತಾಯ್ನಾಡಿಗೆ - ಗಡಇ ಭದ್ರತಾ ಪಡೆ

ಲಾಕ್​​ಡೌನ್ ಜಾರಿಯಾದ ಬಳಿಕ ಅಂತಾರಾಷ್ಟ್ರೀಯ ಮಟ್ಟದ ಗಡಿ ಭಾಗಗಳನ್ನೂ ಸಹ ಬಂದ್ ಮಾಡಲಾಗಿತ್ತು. ಈ ಹಿನ್ನೆಲೆ ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸಿದ್ದ ನೂರಾರು ನಾಗರಿಕರು ಭಾರತದಲ್ಲಿಯೇ ಸಿಲುಕಿದ್ದರು. ಇದೀಗ ವಾಘಾ ಗಡಿಯ ಮೂಲಕ 193 ಪಾಕ್​ ಪ್ರಜೆಗಳನ್ನು ಮರಳಿ ಅವರ ತಾಯ್ನಾಡಿಗೆ ಕಳುಹಿಸಲಾಗಿದೆ.

193 Pakistani citizens stranded in India sent to Pakistan from Attari border
ಲಾಕ್​​​ಡೌನ್​ನಿಂದ ಭಾರತದಲ್ಲೇ ಸಿಲುಕಿದ್ದ 193 ಪಾಕ್​ ಪ್ರಜೆಗಳು ಮರಳಿ ತಾಯ್ನಾಡಿಗೆ
author img

By

Published : May 5, 2020, 11:36 PM IST

ಅಮೃತಸರ: ಕೊರೊನಾ ವೈರಸ್ ಹರಡದಂತೆ ಹೇರಲಾಗಿದ್ದ ಲಾಕ್​ಡೌನ್​ನಿಂದಾಗಿ ಪಾಕಿಸ್ತಾನದ ಸುಮಾರು 193 ನಾಗರಿಕರು ಭಾರತದಲ್ಲಿ ಸಿಲುಕಿದ್ದರು. ಇದೀಗ ಭಾರತದಲ್ಲಿ ಸಿಲುಕಿದ್ದ ಪಾಕಿಸ್ತಾನಿಯರನ್ನು ವಾಘಾ ಗಡಿಯ ಮೂಲಕ ಮರಳಿ ಕಳುಹಿಸಲಾಗಿದೆ.

ಈ ವೇಳೆ ಮಾತನಾಡಿರುವ ಪಾಕಿಸ್ತಾನಿ ಮೂಲದ ಮಹಿಳೆ, ಭಾರತದಲ್ಲಿರುವ ಸಂಬಂಧಿಕರನ್ನು ಭೇಟಿಯಾಗಲು ಬಂದಿದ್ದೆವು. ಇಲ್ಲಿ ಧಾರ್ಮಿಕ ಆಚರಣೆಯಲ್ಲಿ ಭಾಗಿಯಾಗಿದ್ದೆವು ಎಂದಿದ್ದಾರೆ.

ಸೋಮವಾರ ಸಂಜೆಯ ವೇಳೆಯೇ ವಾಘಾ ಗಡಿಯ ಬಳಿ ತಲುಪಿದ ಪಾಕಿಸ್ತಾನಿಯರನ್ನು ಬೆಳಗ್ಗೆ ಗಡಿ ಭದ್ರತಾ ಪಡೆ ಸಿಬ್ಬಂದಿ ಪಾಕಿಸ್ತಾನಕ್ಕೆ ತಲುಪಿಸಿದ್ದಾರೆ. ಇನ್ನು ಇದೇ ತಿಂಗಳ ಆರಂಭದಲ್ಲಿ ಸುಮಾರು 41 ಪಾಕ್​ ನಾಗರಿಕರು ವಾಘಾ ಗಡಿಯ ಮೂಲಕ ತಮ್ಮ ತಾಯ್ನಾಡಿಗೆ ತಲುಪಿದ್ದರು. ಇದೀಗ 193 ಮಂದಿ ಮರಳಿ ಪಾಕಿಸ್ತಾನ ತಲುಪಿದ್ದಾರೆ.

ಭಾರತದಲ್ಲಿ ಲಾಕ್​ಡೌನ್​ ವೇಳೆ ಸಿಲುಕಿ ಈಗ ಮರಳಿ ತೆರಳಿರುವ ನಾಗರಿಕರು ಪಾಕಿಸ್ತಾನ ಸರ್ಕಾರ ಹಾಗೂ ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಇನ್ನು ಭಾರತದಿಂದ ಮರಳಿದ ಪಾಕಿಸ್ತಾನದ ಎಹ್ಸಾನ್ ಅಹ್ಮದ್​ ಎಂಬುವರು ಮಾತನಾಡಿ, ಮಾರ್ಚ್​ 12ಕ್ಕೆ ಭಾರತಕ್ಕೆ ಬಂದಿದ್ದೆ. ಮಾರ್ಚ್​ 19ಕ್ಕೆ ಹಿಂದಿರುಗಬೇಕು ಎಂದುಕೊಂಡಿದ್ದೆ. ಆದರೆ ಲಾಕ್​ಡೌನ್​ನಿಂದಾಗಿ ಹಿಂದಿರುಗಲು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ.

ಭಾರತಕ್ಕೆ ಬಂದಿದ್ದವರನ್ನು ವಾಘಾ ಗಡಿ ಪ್ರವೇಶಕ್ಕೂ ಮುನ್ನವೇ ಹಲವೆಡೆ ತಡೆದು ಪರೀಕ್ಷಿಸಲಾಗಿದೆ. ಅಲ್ಲದೆ ಅಟ್ಟಾರಿ ಗಡಿಯಲ್ಲಿ ಇವರಿಗೆ ಸ್ಕ್ರೀನಿಂಗ್​ ಸಹ ನಡೆಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.