ನವದೆಹಲಿ: ಮಾರ್ಚ್ 1 ರ ಸಂಜೆ, ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾಚಾರ ವದಂತಿ ಕುರಿತು ಪೊಲೀಸರಿಗೆ ಅನೇಕ ಪ್ರದೇಶಗಳಿಂದ ಕರೆಗಳು ಬಂದಿದ್ದವು. ಇದರ ಸಂಪೂರ್ಣ ಮಾಹಿತಿಯನ್ನು ದೆಹಲಿ ಪೊಲೀಸರು ಹಂಚಿಕೊಂಡಿದ್ದಾರೆ. ವಿವಿಧ ಇಲಾಖೆಗಳಿಂದ ಎಷ್ಟು ಪಿಸಿಆರ್ ಕರೆಗಳನ್ನು ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ದೆಹಲಿ ಪೊಲೀಸ್ ಪ್ರಧಾನ ಕಚೇರಿ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಪಶ್ಚಿಮ ದೆಹಲಿಯ ಪ್ರದೇಶಗಳಿಂದ ಗರಿಷ್ಠ ಸಂಖ್ಯೆಯ ಪಿಸಿಆರ್ ಕರೆಗಳನ್ನು ಮಾಡಲಾಗಿದೆ. ಇದರಲ್ಲಿ ಪೊಲೀಸರಿಗೆ 481 ಪಿಸಿಆರ್ ಕರೆಗಳು ಬಂದಿವೆ. ಆಶ್ಚರ್ಯಕರ ಸಂಗತಿಯೆಂದರೆ, ನವದೆಹಲಿ ಜಿಲ್ಲೆಯಿಂದ ಪಿಸಿಆರ್‌ಗೆ ಒಂದೇ ಒಂದು ಕರೆ ಬಂದಿಲ್ಲ. ಆಗ್ನೇಯ ದೆಹಲಿಯ ವಿವಿಧ ಪ್ರದೇಶಗಳಿಂದ ಪೊಲೀಸರಿಗೆ 413 ಕರೆಗಳು ಬಂದಿವೆ.
ದ್ವಾರಕಾ ಜಿಲ್ಲೆಯಿಂದ 300 ಪಿಸಿಆರ್ ಕರೆಗಳು ಬಂದಿವೆ. ಇದೇ ಸಮಯದಲ್ಲಿ ದೆಹಲಿಯ ಹೊರಗಿನ ಪ್ರದೇಶಗಳಿಂದ ಪೊಲೀಸರಿಗೆ 222 ಪಿಸಿಆರ್ ಕರೆಗಳು ಬಂದಿವೆ. ರೋಹಿಣಿ ಜಿಲ್ಲೆಯಿಂದ ಪೊಲೀಸರಿಗೆ 150ಕ್ಕೂ ಹೆಚ್ಚು ಪಿಸಿಆರ್ ಕರೆಗಳು ಬಂದಿವೆ. ಒಟ್ಟು 168 ಕರೆಗಳನ್ನು ಪೊಲೀಸರು ಸ್ವೀಕರಿಸಿದ್ದಾರೆ.
ಹಿಂಸಾಚಾರ ಪೀಡಿತ ಯಮುನಾಪರ್ ಪ್ರದೇಶದಿಂದ ಪೂರ್ವ, ಈಶಾನ್ಯ ಮತ್ತು ಶಹದಾರಾ 3 ಜಿಲ್ಲೆಗಳು ಸೇರಿದಂತೆ ಪೊಲೀಸರಿಗೆ ಕೇವಲ 12 ಪಿಸಿಆರ್ ಕರೆಗಳು ಮಾತ್ರ ಬಂದಿವೆ. ಇದರಲ್ಲಿ ಹಿಂಸಾಚಾರದ ವಿಷಯವನ್ನು ತಿಳಿಸಲಾಗಿದೆ. ಧೌಲಕುವಾನ್-ದೆಹಲಿ ಕ್ಯಾಂಟ್ ಸುತ್ತಮುತ್ತಲಿನ ಪ್ರದೇಶಗಳಿಂದ 30 ಕರೆಗಳು ಬಂದಿವೆ. ಆದರೆ ದಕ್ಷಿಣ ದೆಹಲಿಯಿಂದ ಪೊಲೀಸರಿಗೆ 127 ಕರೆಗಳನ್ನು ಮಾಡಲಾಗಿದೆ.
ವಾಯುವ್ಯ ಜಿಲ್ಲೆಯಲ್ಲಿ 21 ಜನ, ದಕ್ಷಿಣ ದೆಹಲಿಯಲ್ಲಿ 18 ಜನ, ರೋಹಿಣಿ ಜಿಲ್ಲೆಯಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 40 ಜನರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.