ETV Bharat / bharat

ಕಳೆದ 24 ಗಂಟೆಗಳಲ್ಲಿ 1,752 ಹೊಸ ಸೋಂಕಿತರು: ಆರೋಗ್ಯ ಸಚಿವಾಲಯ ಘೋಷಣೆ

author img

By

Published : Apr 25, 2020, 2:48 PM IST

ಕಳೆದ 24 ಗಂಟೆಗಳಲ್ಲಿ 1,752 ಹೊಸ ಕೋವಿಡ್ -19 ಪ್ರಕರಣಗಳು ಹಾಗೂ 37 ಸೋಂಕಿತರು ಸಾವನ್ನಪ್ಪಿರುವ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ತಿಳಿಸಿದ್ದಾರೆ.

luv agarwal
luv agarwal

ನವದೆಹಲಿ: ಕಳೆದ 24 ಗಂಟೆಗಳಲ್ಲಿ 1,752 ಹೊಸ ಕೋವಿಡ್ -19 ಪ್ರಕರಣಗಳು ಹಾಗೂ 37 ಸೋಂಕಿತರು ಸಾವನ್ನಪ್ಪಿರುವ ವರದಿಯಾಗಿದ್ದು, ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 24,606ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಒಟ್ಟು ಸೋಂಕಿತರಲ್ಲಿ 18,299 ಸಕ್ರಿಯ ಪ್ರಕರಣಗಳಿದ್ದು, 5,525 ರೋಗಿಗಳು ಗುಣಮುಖರಾಗಿದ್ದಾರೆ. ಕೊರೊನಾ ವೈರಸ್‌ನಿಂದಾಗಿ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 782ಕ್ಕೆ ಏರಿದೆ.

ಕೊರೊನಾ ವೈರಸ್​ನಿಂದ ಚೇತರಿಕೆ ಪ್ರಮಾಣವನ್ನು ಶೇಕಡಾ 19.89ಕ್ಕೆ ನಿಗದಿಪಡಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ತಿಳಿಸಿದ್ದಾರೆ.

ಕಳೆದ 28 ದಿನಗಳಲ್ಲಿ 15 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. 80 ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.