ETV Bharat / bharat

ಪ್ರೀತಿಸಲು ನಿರಾಕರಣೆ: 17 ವರ್ಷದ ಯುವತಿ ಮೇಲೆ ರೇಪ್​ ಮಾಡಿ ಬೆಂಕಿ ಹಚ್ಚಿದ ವ್ಯಕ್ತಿ! - ಬಾಲಕಿಗೆ ಕಿರುಕುಳ

17 ವರ್ಷದ ಯುವತಿಯೊಬ್ಬಳು ಮೇಲೆ ಯುವಕನೊಬ್ಬ ಅತ್ಯಾಚಾರ ಎಸಗಿ ತದನಂತರ ಬೆಂಕಿ ಹಚ್ಚಿರುವ ಘಟನೆ ತೆಲಂಗಾಣದ ಸೂರ್ಯಪೇಟೆಯಲ್ಲಿ ನಡೆದಿದೆ.

17-year-old girl raped, set on fire by man

author img

By

Published : Feb 29, 2020, 7:06 PM IST

ಹೈದರಾಬಾದ್​: ಪ್ರೀತಿ ಮಾಡಲು ನಿರಾಕರಣೆ ಮಾಡಿರುವ 17 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿರುವ ದುಷ್ಕರ್ಮಿಯೊಬ್ಬ ತದನಂತರ ಬೆಂಕಿ ಹಚ್ಚಿರುವ ಘಟನೆ ತೆಲಂಗಾಣದ ಹೈದರಾಬಾದ್​​ನಲ್ಲಿ ನಡೆದಿದೆ.

ತೆಲಂಗಾಣದ ಸೂರ್ಯಪೇಟೆಯಲ್ಲಿ ಈ ಘಟನೆ ನಡೆದಿದ್ದು, ಯುವತಿಗೆ 21 ವರ್ಷದ ಯುವಕನೊಬ್ಬ ಪ್ರಪೋಸ್​ ಮಾಡಿದ್ದಾನೆ. ಈ ವೇಳೆ, ಆಕೆ ನಿರಾಕರಣೆ ಮಾಡಿದ್ದರಿಂದ ಆಕ್ರೋಶಗೊಂಡ ವ್ಯಕ್ತಿ ಈ ಕೃತ್ಯವೆಸಗಿದ್ದಾನೆ. ಘಟನೆಯಿಂದ ಶೇ.50ರಷ್ಟು ಸುಟ್ಟು ಹೋಗಿರುವ ಯುವತಿ ವರಂಗಲ್​​ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ.

ಯುವತಿಗೆ ಕಿರುಕುಳ ನೀಡಬಾರದು ಎಂದು ಪೊಲೀಸರು ವಾರ್ನ್​ ಮಾಡಿದ್ದರೂ, ಶುಕ್ರವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕೆಯನ್ನ ಅಪಹರಣ ಮಾಡಿರುವ ವ್ಯಕ್ತಿ, ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ದುಷ್ಕೃತ್ಯವೆಸಗಿ ತದನಂತರ ಬೆಂಕಿ ಹಚ್ಚಿದ್ದಾನೆ. ಘಟನೆ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಬಾಲಕಿ ತಂದೆ ದೂರು ದಾಖಲು ಮಾಡಿದ್ದು, ಕೊಲೆ ಯತ್ನ, ಅತ್ಯಾಚಾರ ಹಾಗೂ ಪೋಕ್ಸೊ ಕಾಯ್ದೆಯಡಿ ಯುವಕನ ವಿರುದ್ಧ ದೂರು ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.