ETV Bharat / bharat

''ಈ ವಾರ ಹಾಗೂ ಮುಂದಿನ ವಾರ ಅಮೆರಿಕಕ್ಕೆ ಬಲು ಕಠಿಣ ಪರಿಸ್ಥಿತಿ'': ಟ್ರಂಪ್ ಕಳವಳ​ - ಕೋವಿಡ್​-19

ಮುಂದಿನ ದಿನಗಳಲ್ಲಿ ಅಮೆರಿಕನ್ನರ ಜೀವನ ಜೀವನ ಮತ್ತಷ್ಟು ಗಂಭೀರವಾಗಲಿದೆ. ಈ ವಾರ ಹಾಗೂ ಮುಂದಿನ ವಾರ ಕಠಿಣವಾಗಿರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಆತಂಕ ವ್ಯಕ್ತಪಡಿಸಿದ್ದಾರೆ.

donald trump
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​
author img

By

Published : Apr 6, 2020, 3:25 PM IST

ವಾಷಿಂಗ್ಟನ್​(ಅಮೆರಿಕ): ರಾಷ್ಟ್ರದಲ್ಲಿ ಈವರೆಗೂ 1.6 ಮಿಲಿಯನ್​ ಮಂದಿಗೆ ಕೊರೊನಾ ಸೋಂಕಿನ ಪತ್ತೆ ಪರೀಕ್ಷೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸ್ಪಷ್ಟಪಡಿಸಿದ್ದಾರೆ.

ಶ್ವೇತಭವನದ ಕೊರೊನಾ ವೈರಸ್ ಟಾಸ್ಕ್​ ಫೋರ್ಸ್​ನಲ್ಲಿ ಮಾತನಾಡಿದ ಅವರು ದೇಶಾದ್ಯಂತ ಮೂರು ಸಾವಿರ ಮಂದಿ ಸೇನಾ ಸಿಬ್ಬಂದಿ ಹಾಗೂ ವೈದ್ಯಕೀಯ ಸಿಬ್ಬಂದಿಯ ತಂಡವನ್ನು ಕೊರೊನಾ ವಿರುದ್ಧದ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದರು.

ಫೆಡರಲ್​ ಎಮರ್ಜೆನ್ಸಿ ಮ್ಯಾನೇಜ್​ಮೆಂಟ್​ ಏಜೆನ್ಸಿ ಮೂಲಕ ನ್ಯೂಜೆರ್ಸಿಗೆ 500, ಲೂಸಿಯಾನಾಗೆ 200, ಇಲಿನಾಯ್ಸ್​ಗೆ 600, ಮೆಸ್ಸಾಚುಸೆಟ್ಸ್​ಗೆ 100, ಮಿಚಿಗನ್​ಗೆ 300 ಸೇರಿದಂತೆ ಒಟ್ಟು 1700 ವೆಂಟಿಲೇಟರ್​ಗಳನ್ನು ವಿವಿಧ ರಾಜ್ಯಗಳಿಗೆ ಹಸ್ತಾಂತರಿಸೋದಾಗಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ನ್ಯೂಯಾರ್ಕ್​ ಹಾಗೂ ಲಾಂಗ್​ ಐಲ್ಯಾಂಡ್​ಗಳಿಗೆ ಮಾಸ್ಕ್​ಗಳನ್ನು ನೀಡುವುದಾಗಿ ಭರವಸೆ ನೀಡಿದರು.

ಮುಂದಿನ ದಿನಗಳಲ್ಲಿ ಅಮೆರಿಕನ್ನರ ಜೀವನ ಮತ್ತಷ್ಟು ಗಂಭೀರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ ಟ್ರಂಪ್​​ ''ಈ ವಾರ ಹಾಗೂ ಮುಂದಿನ ವಾರ ಕಠಿಣವಾಗಿದ್ದು, ಮರಣ ಪ್ರಮಾಣ ದುರಾದೃಷ್ಟವಶಾತ್ ಹೆಚ್ಚಾಗಿದೆ'' ಎಂದಿದ್ದಾರೆ.

ಈ ಸದ್ಯಕ್ಕೆ ಅಮೆರಿಕದಲ್ಲಿ 3,37,620 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 9,643 ಮಂದಿ ಸೋಂಕಿನ ಕಾರಣಕ್ಕೆ ಮೃತಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.