ಮೇಷ
ಈ ದಿನ ಪರಿಪೂರ್ಣವಾಗಿ ಅದರಲ್ಲೂ ಸಾರ್ವಜನಿಕ ವಲಯ ಅಥವಾ ವೈದ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಚೆನ್ನಾಗಿರುತ್ತದೆ. ನೀವು ಸಾಕಷ್ಟು ಪ್ರಯತ್ನಗಳನ್ನು ಪಡುತ್ತೀರಿ ಮತ್ತು ದಿನದ ಅಂತ್ಯಕ್ಕೆ ನೀವು ಬಾಕಿ ಕೆಲಸಗಳನ್ನು ಪೂರೈಸುತ್ತೀರಿ. ಇಂದು ನೀವು ನಿಮ್ಮ ಮಕ್ಕಳು ಮಾಡಿದ ಬೇಡಿಕೆಗಳನ್ನು ಪೂರೈಸುತ್ತೀರಿ ಅಲ್ಲದೆ ಅವರೊಂದಿಗೆ ಹೆಚ್ಚು ಸಮಯ ಕಳೆಯುತ್ತೀರಿ.
ವೃಷಭ
ನಿಮ್ಮ ಸೃಜನಶೀಲ ಮತ್ತು ಸ್ಪರ್ಧಾತ್ಮಕ ಭಾಗವು ಇಂದು ಹೊತ್ತಿ ಉರಿಯುತ್ತದೆ. ನಿಮ್ಮ ಕೆಲಸದಲ್ಲಿನ ದಕ್ಷತೆ ನಿಮ್ಮ ಸಹೋದ್ಯೋಗಿಗಳನ್ನು ಮೂಕರನ್ನಾಗಿಸುತ್ತದೆ. ನೀವು ಕೆಲಸದಲ್ಲಿ ಹಿರಿಯರನ್ನು ಪ್ರಭಾವಿಸುತ್ತೀರಿ.
ಮಿಥುನ
ನೀವು ಭಾವನಾತ್ಮಕ ಚಕ್ರದ ಸುಳಿಯಲ್ಲಿ ಸಿಲುಕಿಕೊಳ್ಳುವುದನ್ನು ಕಾಣುತ್ತೀರಿ. ನಿಮ್ಮ ಮೆದುಳಿಗಿಂತ ಹೃದಯಕ್ಕೆ ಆದ್ಯತೆ ನೀಡುತ್ತೀರಿ. ಇದರಿಂದಾಗಿ, ನಿಮಗೆ ಯಾರು ಒಳ್ಳೆಯವರು ಮತ್ತು ಯಾರಿಗೆ ಕೆಟ್ಟ ಉದ್ದೇಶಗಳಿವೆ ಎಂದು ತಿಳಿಯಲು ಅಶಕ್ತರಾಗಿದ್ದೀರಿ. ಆದರೆ ದಿನದ ಅಂತ್ಯಕ್ಕೆ ನಿಮ್ಮ ಅದೃಷ್ಟ ಒಳ್ಳೆಯದಕ್ಕೆ ಬದಲಾಗುತ್ತದೆ.
ಕರ್ಕಾಟಕ
ಇಂದಿನಿಂದ ನಿಮ್ಮ ಉಜ್ವಲ ಭವಿಷ್ಯಕ್ಕೆ ಯೋಜನೆ ಪ್ರಾರಂಭಿಸುತ್ತೀರಿ. ನೀವು ನಿಮ್ಮ ಎಲ್ಲಾ ಯೋಜನೆಗಳನ್ನೂ ಕಾರ್ಯರೂಪಕ್ಕೆ ತರುತ್ತೀರಿ. ನಿಮ್ಮ ವಿವರವಾದ ಆಲೋಚನೆ ಮುಂದಿನ ದಿನಗಳಲ್ಲಿ ನೆರವಾಗಲಿದೆ. ನಿಮ್ಮ ಎಲ್ಲಾ ಪ್ರಯತ್ನಗಳಲ್ಲೂ ಯಶಸ್ಸು ನಿರೀಕ್ಷೆ ಮಾಡುವುದರಿಂದ ಈ ದಿನ ಅತ್ಯುತ್ತಮವಾಗಿದೆ.
ಸಿಂಹ
ನೀವು ಹೊಸ ಪ್ರಾಜೆಕ್ಟ್ಗಳನ್ನು ತೆಗದುಕೊಳ್ಳುತ್ತೀರಿ ಮತ್ತು ನಿಮ್ಮ ಕೆಲಸಗಳನ್ನು ಪರಿಣಾಮಕಾರಿಯಾಗಿ ಪೂರೈಸುತ್ತೀರಿ. ಬಾಂಧವ್ಯಗಳನ್ನು ನಿಭಾಯಿಸುವಾಗ ನೀವು ಕೆಲವು ಅಡೆತಡೆಗಳನ್ನು ಎದುರಿಸುತ್ತೀರಿ. ಆದರೆ ಆ ಸಮಸ್ಯೆಗಳು ಸರಾಗವಾಗಿ ಇತ್ಯರ್ಥವಾಗುತ್ತವೆ.
ಕನ್ಯಾ
ನಿಮ್ಮ ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳು ಇಂದು ಬೆಳಕು ಕಾಣುತ್ತವೆ. ನಿಮ್ಮ ವಿಶ್ಲೇಷಣಾತ್ಮಕ ಮತ್ತು ಸಂಧಾನ ಕೌಶಲ್ಯಗಳು ಯಾವುದೇ ವಿವಾದಗಳನ್ನು ಇತ್ಯರ್ಥಪಡಿಸಲು ಕೆಲಸ ಮಾಡುತ್ತವೆ. ನೀವು ತಾಳ್ಮೆಯ ಪ್ರಾಮುಖ್ಯತೆ ಅರ್ಥ ಮಾಡಿಕೊಳ್ಳುತ್ತೀರಿ ಮತ್ತು ಆದ್ದರಿಂದ ಶಾಂತ ಮತ್ತು ಸಮಚಿತ್ತತೆಯಿಂದ ಯಶಸ್ಸಿನತ್ತ ಮುನ್ನಡೆಯುತ್ತೀರಿ.
ತುಲಾ
ಇಂದು ನಿಮಗೆ ನಿಮ್ಮ ಕುಟುಂಬದ ದಿನವಾಗಿದೆ. ಅವರೊಂದಿಗೆ ನೀವು ಆನಂದ ಹೊಂದುತ್ತೀರಿ ಹಾಗೂ ಕಿರಿದಾದ ಟ್ರಿಪ್ ಅಥವಾ ಪಿಕ್ನಿಕ್ ಹೋಗುತ್ತೀರಿ. ಈ ದಿನ ಹಗುರ ಮತ್ತು ಆನಂದ ತುಂಬಿದೆ. ನೀವು ಮನಃಶಾಂತಿಗಾಗಿ ಆಧ್ಯಾತ್ಮಿಕ ಸ್ಥಳ ಅಥವಾ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು.
ವೃಶ್ಚಿಕ
ನಿಮ್ಮಲ್ಲಿ ಜೀವಿಸುತ್ತಿರುವ ಜ್ವಾಲಾಮುಖಿ ಇಂದು ಹೊರಕ್ಕೆ ಚಿಮ್ಮುತ್ತದೆ. ಈ ಅಭೂತಪೂರ್ವ ವಿದ್ಯಮಾನ ಆರೋಗ್ಯದ ಸಮಸ್ಯೆಗಳನ್ನು ಉಂಟು ಮಾಡಬಹುದು. ಒತ್ತಡ ನಿವಾರಿಸಲು, ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಲು ಪ್ರಯತ್ನಿಸಿ.
ಧನು
ಕೆಲಸದ ಸ್ಥಳದಲ್ಲಿ ನೀವು ಇಂದು ಸಾಕಷ್ಟು ಒತ್ತಡ ಅನುಭವಿಸಲಿದ್ದೀರಿ. ನೀವು ವರ್ಕೊಹಾಲಿಕ್ ಆಗುವ ಸಾಧ್ಯತೆಗಳಿವೆ. ಸಂಜೆಯ ವೇಳೆಗೆ, ನೀವು ವಿಶ್ರಾಂತಿ ಕಂಡುಕೊಳ್ಳುತ್ತೀರಿ ಮತ್ತು ಉಳಿದ ದಿನವನ್ನು ಆನಂದಿಸುತ್ತೀರಿ.
ಮಕರ
ನೀವು ಕಾನೂನು ಸಂಘರ್ಷಕ್ಕೆ ಸಿಲುಕುತ್ತೀರಿ. ಸತತವಾಗಿ ರಕ್ಷಣೆಯಲ್ಲಿರಬೇಕು ಮತ್ತು ಯಾವ ಆಯ್ಕೆಯನ್ನೂ ಬಿಡಬಾರದು. ನೀವು ಹಣಕಾಸಿನ ನಷ್ಟಗಳನ್ನು ಹೊಂದಬಹುದು. ನೀವು ದಲ್ಲಾಳಿಯ ರೀತಿಯಲ್ಲಿದ್ದರೆ ಮಹತ್ತರ ನಷ್ಟ ಅನುಭವಿಸಬಹುದು. ಅದನ್ನು ತಡೆಯಲು ಎಲ್ಲಾ ಸಮಯದಲ್ಲೂ ಜಾಗರೂಕರಾಗಿರಿ ಮತ್ತು ಲಭ್ಯವಿರುವ ಪ್ರತಿ ಅವಕಾಶವನ್ನೂ ಬಳಸಿಕೊಳ್ಳಿ.
ಕುಂಭ
ಇಂದು ನಿಮ್ಮ ಪ್ರೀತಿಪಾತ್ರರ ಜೊತೆಯಲ್ಲಿ ಆನಂದಿಸುತ್ತೀರಿ. ಪಿಕ್ನಿಕ್ ಮತ್ತು ಶಾಪಿಂಗ್ ನಿಮ್ಮ ಮಾಡಲೇಬೇಕಾದ ಪಟ್ಟಿಯಲ್ಲಿವೆ. ಕುಟುಂಬದೊಂದಿಗೆ ಪ್ರೀತಿ ಮತ್ತು ಸಂಭ್ರಮ ನಿಮ್ಮ ತಾರೆಗಳು ಸೂಚಿಸುತ್ತಿವೆ.
ಮೀನ
ನೀವು ಜನರನ್ನು ಅರ್ಥ ಮಾಡಿಕೊಳ್ಳಲು ಮತ್ತು ಅವರೊಂದಿಗೆ ಅಗತ್ಯವಿರುವಾಗ ಅನುಕರಿಸಲು ಸಮರ್ಥರಾಗುತ್ತೀರಿ. ಇದು ನಿಮಗೆ ಅವರ ಆಶೀರ್ವಾದ ಪಡೆದುಕೊಳ್ಳಲು ನೆರವಾಗುತ್ತದೆ. ನಿಮ್ಮನ್ನು ಸಮರ್ಥ ಬಾಸ್, ಸಹ-ಕೆಲಸಗಾರ, ಸಂಗಾತಿ ಮತ್ತು ಒಡಹುಟ್ಟಿದವರಂತೆ ಸಾಬೀತುಪಡಿಸಿಕೊಳ್ಳುತ್ತೀರಿ. ಇದು ನಿಮ್ಮನ್ನು ವ್ಯಕ್ತಿಯಾಗಿ ವ್ಯಾಖ್ಯಾನಿಸುವುದರಿಂದ ಈ ಸದ್ಗುಣಗಳನ್ನು ಕಳೆದುಕೊಳ್ಳುವುದು ಒಳ್ಳೆಯದಲ್ಲ.