ETV Bharat / bharat

ವಂದೇ ಭಾರತ್ ಮಿಷನ್: 16.45 ಲಕ್ಷ ಭಾರತೀಯರು ದೇಶಕ್ಕೆ ವಾಪಸ್​​

author img

By

Published : Oct 2, 2020, 9:31 AM IST

ಕೊರೊನಾ ಸೋಂಕು ತೀವ್ರವಾದ ಸಮಯದಲ್ಲಿ ಕೇಂದ್ರ ಸರ್ಕಾರ ರೂಪಿಸಿದ ವಂದೇ ಭಾರತ್ ಮಿಷನ್ ಯೋಜನೆಯಿಂದ 16.45 ಲಕ್ಷಕ್ಕೂ ಅಧಿಕ ಮಂದಿ ಭಾರತೀಯರನ್ನು ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

Vande Bharat mission
ವಂದೇ ಭಾರತ್ ಮಿಷನ್

ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರಲು ಮೇ 7ರಂದು ಕೇಂದ್ರ ಸರ್ಕಾರ ಪ್ರಾರಂಭಿಸಿದ 'ವಂದೇ ಭಾರತ್ ಮಿಷನ್' ಕಾರ್ಯಾಚರಣೆಯಲ್ಲಿ ಇಲ್ಲಿಯವರೆಗೆ 16.45 ಲಕ್ಷ ಮಂದಿ ಭಾರತೀಯರು ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಮಾತನಾಡಿ, ವಂದೇ ಭಾರತ್ ಮಿಷನ್​ನ ಆರನೇ ಹಂತವು ಮುಕ್ತಾಯಗೊಂಡಿದೆ. ಈ ಹಂತದಲ್ಲಿ 24 ದೇಶಗಳಿಂದ 894 ಅಂತಾರಾಷ್ಟ್ರೀಯ ವಿಮಾನಗಳು ಮತ್ತು 142 ಫೀಡರ್ ವಿಮಾನಗಳ ಮೂಲಕ ಭಾರತದಾದ್ಯಂತ 24 ವಿಮಾನ ನಿಲ್ದಾಣಗಳನ್ನು ತಲುಪಲಾಗಿದೆ.

ಆರನೇ ಹಂತದಲ್ಲಿ 1.75 ಲಕ್ಷ ಜನರನ್ನು ವಾಪಸ್ ಕರೆತರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್ 30ರ ವೇಳೆಗೆ 16.45 ಲಕ್ಷ ಮಂದಿ ಭಾರತೀಯರು ವಂದೇ ಭಾರತ್ ಮಿಷನ್‌ನ ವಿವಿಧ ವಿಧಾನಗಳ ಮೂಲಕ ಭಾರತಕ್ಕೆ ಬಂದಿದ್ದಾರೆ.

ಮುಂದುವರೆದ ಬೇಡಿಕೆಯನ್ನು ಪೂರೈಸಲು ವಂದೇ ಭಾರತ್ ಮಿಷನ್​ನ 7ನೇ ಹಂತವನ್ನು ಅಕ್ಟೋಬರ್ 1, 2020ರಿಂದ ಕಾರ್ಯಗತಗೊಳಿಸಲಾಗಿದೆ. ಈಗಿನಂತೆ 19 ದೇಶಗಳಿಂದ 820 ಅಂತಾರಾಷ್ಟ್ರೀಯ ವಿಮಾನಗಳನ್ನು ಈ ತಿಂಗಳು 7ನೇ ಹಂತದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಶ್ರೀವಾಸ್ತವ ತಿಳಿಸಿದ್ದಾರೆ.

ಭಾರತವು ದ್ವಿಪಕ್ಷೀಯ 'ಏರ್ ಬಬಲ್' ವ್ಯವಸ್ಥೆಯನ್ನು ಹೊಂದಿರುವ 14 ದೇಶಗಳ ಪ್ರಮುಖ ವಿಮಾನಗಳನ್ನು ಒಳಗೊಂಡಿದೆ. ಈ ವಿಮಾನಗಳು ಭಾರತದಾದ್ಯಂತ 24 ವಿಮಾನ ನಿಲ್ದಾಣಗಳನ್ನು ತಲುಪಲಿದ್ದು, ಅಂದಾಜು 1.5 ಲಕ್ಷ ಜನರನ್ನು ವಾಪಸ್​​ ಕರೆತರಲಾಗುವುದು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.