ETV Bharat / bharat

ಕೊರೊನಾ ಜಾಗೃತಿಗೆ ಲಾಠಿ ಹಿಡಿದು ಪೊಲೀಸ್​ ಆದ 14 ವರ್ಷದ ಬಾಲಕ!! - ಬಹರಾಯಿಚ್

ಸೌಮ್ಯ ಅಗರ್ವಾಲ್ ಎಂಬ ಹೆಸರಿನ ಬಾಲಕನಲ್ಲಿರುವ ಅದ್ಭುತ ಪ್ರತಿಭೆಯನ್ನು ಗುರುತಿಸಿರುವ ಸ್ಥಳೀಯ ಪೊಲೀಸ್ ಇಲಾಖೆ, ಕೊರೊನಾ ನಿಯಂತ್ರಣ ಜಾಗೃತಿಗಾಗಿ ಬಾಲಕನನ್ನು ತನ್ನೊಂದಿಗೆ ಸೇರಿಸಿಕೊಂಡಿದೆ.

14-year-old police outpost
14-year-old police outpost
author img

By

Published : May 2, 2020, 5:24 PM IST

ಬಹರಾಯಿಚ್(ಉತ್ತರಪ್ರದೇಶ) : ಕೈಯಲ್ಲೊಂದು ಲಾಠಿ ಹಿಡಿದು ಪೊಲೀಸ್​ ಚೆಕ್​ಪೋಸ್ಟ್​ನಲ್ಲಿ ನಿಂತು ಎಲ್ಲರಿಗೂ ಕೊರೊನಾ ಸುರಕ್ಷತೆಯ ಪಾಠ ಹೇಳುತ್ತಿರುವ 14 ವರ್ಷದ ಬಾಲಕನೊಬ್ಬ ಈಗ ಎಲ್ಲರ ಗಮನ ಸೆಳೆದಿದ್ದಾನೆ. ಮನೆಯಿಂದ ಯಾರೂ ಹೊರಬರಬೇಡಿ, ಎಲ್ಲರೂ ಮಾಸ್ಕ್​ ಧರಿಸಿ, ಸ್ಯಾನಿಟೈಸರ್​ನಿಂದ ಕೈಗಳನ್ನು ಆಗಾಗ ತೊಳೆಯಿರಿ ಎಂದು ಜಾಗೃತಿ ಮೂಡಿಸುತ್ತಿರುವ ಬಾಲಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸೌಮ್ಯ ಅಗರ್ವಾಲ್ ಎಂಬ ಹೆಸರಿನ ಬಾಲಕನಲ್ಲಿರುವ ಅದ್ಭುತ ಪ್ರತಿಭೆ ಗುರುತಿಸಿರುವ ಸ್ಥಳೀಯ ಪೊಲೀಸ್ ಇಲಾಖೆ, ಕೊರೊನಾ ನಿಯಂತ್ರಣ ಜಾಗೃತಿಗಾಗಿ ಬಾಲಕನನ್ನು ತನ್ನೊಂದಿಗೆ ಸೇರಿಸಿಕೊಂಡಿದೆ. "ಇದು ಸಮುದಾಯ ಪೊಲೀಸಿಂಗ್​ ಕಾಲವಾಗಿದೆ. ಹೀಗಾಗಿ ನಾವು ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಮೂಲಕ ಜನರಿಗೆ ಜಾಗೃತಿ ಮೂಡಿಸಲು ಬಾಲಕ ಸೌಮ್ಯ ಅಗರ್ವಾಲ್​ನನ್ನು ಜೊತೆಗಿರಿಸಿಕೊಂಡಿದ್ದೇವೆ." ಎನ್ನುತ್ತಾರೆ ಸ್ಥಳೀಯ ಎಸ್ಪಿ ವಿಪಿನ್ ಮಿಶ್ರಾ.

ಸೌಮ್ಯ ಅಗರ್ವಾಲ್​ ಭವಿಷ್ಯದಲ್ಲಿ ಪೊಲೀಸ್​ ಅಧಿಕಾರಿಯಾಗುವ ಗುರಿ ಹೊಂದಿದ್ದಾನೆ. ಈತನ ಆಕಾಂಕ್ಷೆಗಳಿಗೆ ಸ್ಪಂದಿಸಿರುವ ಪೊಲೀಸ್ ಇಲಾಖೆ ಪೊಲೀಸ್ ಜವಾಬ್ದಾರಿ ನಿರ್ವಹಿಸುವ ಅವಕಾಶವೊಂದನ್ನು ಈತನಿಗೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.