ಇಂದೋರ್(ಮಧ್ಯಪ್ರದೇಶ): ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿರುವ ಕಾರಣ ಯಾವುದೇ ವ್ಯಾಪಾರ ಹೇಳಿಕೊಳ್ಳುವ ರೀತಿಯಲ್ಲಿ ನಡೆಯುತ್ತಿಲ್ಲ. ಇದರ ಮಧ್ಯೆ ಕೆಲ ಪೊಲೀಸರು, ಅಧಿಕಾರಿಗಳು ವ್ಯಾಪಾರಿಗಳ ಬಳಿ ತೆರಳಿ ಲಂಚಕ್ಕಾಗಿ ಮೊರೆ ಇಡ್ತಿರುವ ಘಟನೆ ಮೇಲಿಂದ ಮೇಲೆ ಬೆಳಕಿಗೆ ಬರುತ್ತಿವೆ. ಸದ್ಯ ಮಧ್ಯಪ್ರದೇಶದ ಇಂದೋರ್ನಲ್ಲೂ ಇಂತಹ ಘಟನೆವೊಂದು ನಡೆದಿದೆ.
-
Civic officials in Indore allegedly overturned egg cart of a small boy. The officials had warned that the egg cart would be seized if he did not leave the spot @ChouhanShivraj @OfficeOfKNath @INCIndia @INCMP @GargiRawat @RajputAditi @ndtvindia @ndtv pic.twitter.com/PnuqeLrbJh
— Anurag Dwary (@Anurag_Dwary) July 23, 2020 " class="align-text-top noRightClick twitterSection" data="
">Civic officials in Indore allegedly overturned egg cart of a small boy. The officials had warned that the egg cart would be seized if he did not leave the spot @ChouhanShivraj @OfficeOfKNath @INCIndia @INCMP @GargiRawat @RajputAditi @ndtvindia @ndtv pic.twitter.com/PnuqeLrbJh
— Anurag Dwary (@Anurag_Dwary) July 23, 2020Civic officials in Indore allegedly overturned egg cart of a small boy. The officials had warned that the egg cart would be seized if he did not leave the spot @ChouhanShivraj @OfficeOfKNath @INCIndia @INCMP @GargiRawat @RajputAditi @ndtvindia @ndtv pic.twitter.com/PnuqeLrbJh
— Anurag Dwary (@Anurag_Dwary) July 23, 2020
ರಸ್ತೆ ಬದಿ ಮೊಟ್ಟೆ ವ್ಯಾಪಾರ ಮಾಡುತ್ತಿದ್ದ 14 ವರ್ಷದ ಬಾಲಕನೋರ್ವ 100 ರೂ. ಲಂಚ ನೀಡಲಿಲ್ಲ ಎಂಬ ಕಾರಣಕ್ಕಾಗಿ ಪುರಸಭೆ ಅಧಿಕಾರಿಗಳು ತಳ್ಳುವ ಗಾಡಿ ದೂಡಿ ಅದರಲ್ಲಿದ್ದ ಮೊಟ್ಟೆ ಸಂಪೂರ್ಣವಾಗಿ ಒಡೆದು ಹಾಕಿರುವ ಘಟನೆ ನಡೆದಿದೆ.
ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಅಧಿಕಾರಿಗಳ ನಡೆಗೆ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗುತ್ತಿದೆ. ಮೊಟ್ಟೆ ವ್ಯಾಪಾರ ಮಾಡ್ತಿದ್ದ ಬಾಲಕನ ಬಳಿ ಬಂದಿರುವ ಪುರಸಭೆ ಅಧಿಕಾರಿಗಳು ತಳ್ಳು ಗಾಡಿ ತೆಗೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ. ಒಂದು ವೇಳೆ ಇದೇ ಜಾಗದಲ್ಲಿ ವ್ಯಾಪಾರ ನಡೆಸುವ ಹಾಗಾದ್ರೆ 100 ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ ಬಾಲಕ ಇದಕ್ಕೆ ಒಪ್ಪದ ಕಾರಣ ಆತನ ಗಾಡಿ ತಳ್ಳಿ ಮೊಟ್ಟೆ ಒಡೆದು ಹಾಕಿದ್ದಾರೆ.
ತನ್ನ ಅಳಲು ತೊಡಿಕೊಂಡಿರುವ ಬಾಲಕ, ಮಹಾಮಾರಿ ಕೊರೊನಾ ವೈರಸ್ ಕಾರಣದಿಂದಾಗಿ ಪ್ರತಿದಿನ ವ್ಯಾಪಾರ ಸರಿಯಾಗಿ ನಡೆಯುತ್ತಿಲ್ಲ. ಇದೀಗ ಅಧಿಕಾರಿಗಳು ಮೊಟ್ಟೆ ಒಡೆದು ಹಾಕಿರುವ ಕಾರಣ ಮತ್ತಷ್ಟು ಆರ್ಥಿಕ ಹೊರೆ ಬಿದ್ದಿದೆ ಎಂದಿದ್ದಾರೆ.