ಸೋಲಾಪುರ (ಮಹಾರಾಷ್ಟ್ರ): ವಾಯುಭಾರ ಕುಸಿತದ ಪರಿಣಾಮ ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ 14 ಜನರು ಸಾವನ್ನಪ್ಪಿದ್ದಾರೆ. ಪ್ರವಾಹದ ಅಬ್ಬರಕ್ಕೆ 570 ಗ್ರಾಮಗಳು ಹಾನಿಗೊಳಗಾಗಿವೆ ಎಂದು ಇಲ್ಲಿನ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಅಕ್ಟೋಬರ್ 14 ರಂದು ದೇವಾಲಯ ಪಟ್ಟಣವಾದ ಪಂಢರಪುರದಲ್ಲಿ ಗೋಡೆ ಕುಸಿದು ಆರು ಮಂದಿ ಸಾವನ್ನಪ್ಪಿದ್ದರೆ, ಉಳಿದ ಸಾವುಗಳು ಮಳೆ ಮತ್ತು ಪ್ರವಾಹ ಸಂಬಂಧಿತ ಘಟನೆಗಳಲ್ಲಿ ಸಂಭವಿಸಿವೆ.
ರಾಜ್ಯದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಗುರುವಾರ ಪಂಢರಪುರ ಘಟನೆಯ ತನಿಖೆಗೆ ಆದೇಶಿಸಿ, ಅದಕ್ಕೆ ಕಾರಣರಾದವರ ವಿರುದ್ಧ ನರಹತ್ಯೆ ಅಪರಾಧ ಪ್ರಕರಣ ದಾಖಲಿಸಬೇಕೆಂದು ಸೂಚನೆ ನೀಡಿದ್ದಾರೆ.
ಕಳೆದ ಒಂದೆರಡು ದಿನಗಳಲ್ಲಿ ಬಿದ್ದ ಜೋರು ಮಳೆಯಿಂದಾಗಿ ರಾಜ್ಯದ ಹಲವಾರು ಭಾಗಗಳು ಹಾನಿಗೀಡಾಗಿವೆ. ಪಶ್ಚಿಮ ಮಹಾರಾಷ್ಟ್ರದ ಸೋಲಾಪುರ, ಕೊಲ್ಹಾಪುರ, ಸಾಂಗ್ಲಿ, ಪುಣೆ, ಸತಾರಾ ಮತ್ತು ಮರಾಠವಾಡ, ಲಾತೂರ್, ಉಸ್ಮಾನಾಬಾದ್ ಮತ್ತು ಬೀಡ್ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಾಗಿವೆ.