ETV Bharat / bharat

ಭಲೇ ಬಾಲೆ:  1,300 ಕಿ.ಮೀ ಸೈಕಲ್​ ಸವಾರಿ... ತಂದೆಯನ್ನ ಸ್ವಗ್ರಾಮಕ್ಕೆ ಕರೆತಂದ 13ರ ಪುತ್ರಿ - ತಂದೆ ಮಗಳ ಸೈಕಲ್ ಸವಾರಿ

ಲಾಕ್​ಡೌನ್​ನಿಂದ ಹರಿಯಾಣದಲ್ಲಿ ಸಿಲುಕಿದ್ದ ಅನಾರೋಗ್ಯ ಪೀಡಿತ ತಂದೆಯನ್ನು 13 ವರ್ಷದ ಮಗಳು 1,300 ಕಿ.ಮೀ.ದೂರದ ಸ್ವಗ್ರಾಮಕ್ಕೆ ಸೈಕಲ್​ ಮೇಲೆಯೇ ಕರೆ ತಂದಿದ್ದಾಳೆ.

13-year-old girl from Bihar pedals 1300 km
ಸೈಕಲ್​ನಲ್ಲಿ ತಂದೆಯನ್ನ ಸ್ವಗ್ರಾಮಕ್ಕೆ ಕರೆತಂದ 13 ವರ್ಷದ ಪುತ್ರಿ
author img

By

Published : May 18, 2020, 6:07 PM IST

ದರ್ಭಂಗಾ (ಬಿಹಾರ): 13 ವರ್ಷದ ಬಾಲಕಿಯೊಬ್ಬಳು ತನ್ನ ತಂದೆಯನ್ನು ಸೈಕಲ್​ನಲ್ಲಿ ಕೂರಿಸಿಕೊಂಡು ಸುಮಾರು 1,300 ಕಿಲೋ ಮೀಟರ್​ ದೂರದ ತನ್ನ ಸ್ವಗ್ರಾಮಕ್ಕೆ ಕರೆತಂದಿದ್ದಾಳೆ.

13 ವರ್ಷದ ಜ್ಯೋತಿ ಹರಿಯಾಣದ ಗುರುಗ್ರಾಮ್​ನಿಂದ 13,000 ಕಿ.ಮೀ ದೂರದ ಬಿಹಾರ್​ನ ದರ್ಭಂಗದ ಸಿರ್​​​ಹುಲ್ಲಿ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದಾಳೆ. ತಂದೆ ಮೋಹನ್ ಪಾಸ್ವಾನ್ ಆಟೋ ಚಾಲಕರಾಗಿದ್ದು, ಜನವರಿಯಲ್ಲಿ ಅಪಘಾತಕ್ಕೀಡಾಗಿದ್ದರು.

ಸೈಕಲ್​ನಲ್ಲಿ ತಂದೆಯನ್ನ ಸ್ವಗ್ರಾಮಕ್ಕೆ ಕರೆತಂದ 13 ವರ್ಷದ ಪುತ್ರಿ

ತಂದೆ ಮತ್ತು ಮಗಳು ಹರಿಯಾಣದಲ್ಲಿರುವಾಗ ಲಾಕ್​ಡೌನ್ ಘೋಷಣೆಯಾದ ಪರಿಣಾಮ ಅವರನ್ನು ಕೆಲಸದಿಂದ ತೆಗೆದ ಮಾಲೀಕ ಮನೆಗೆ ತೆರಳುವಂತೆ ಸೂಚನೆ ನೀಡಿದ್ದಾರೆ. ಈ ವೇಳೆ, ಅವರ ಬಳಿ ಇದ್ದದ್ದು ಕೇವಲ 500 ರೂಪಾಯಿ ಮಾತ್ರ. ದಿನಸಿ ತೆಗೆದುಕೊಳ್ಳುವ ತಂದೆಯ ಸಲಹೆ ತಿರಸ್ಕರಿಸಿದ ಪುತ್ರಿ ಒಂದು ಸೈಕಲ್ ತೆಗೆದುಕೊಂಡು ತಂದೆಯನ್ನು ಕೂರಿಸಿಕೊಂಡು 1,300 ಕಿ.ಮೀ. ಪ್ರಯಾಣಿಸಿದ್ದಾಳೆ.

ಈ ಬಗ್ಗೆ ಮಾತನಾಡಿರುವ ಜ್ಯೋತಿ, ನಮ್ಮ ಬಳಿ ಇದ್ದದ್ದು ಕೇವಲ 500 ರೂಪಾಯಿ ಮಾತ್ರ. ನಾವು ಅಲ್ಲೇ ಇದ್ದಿದ್ದರೆ ಹಸಿವಿನಿಂದ ಸಾಯುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಹೀಗಾಗಿ ತಂದೆಯನ್ನು ಸೈಕಲ್ ಮೇಲೆ ಕೂರಿಸಿಕೊಂಡು ನಮ್ಮ ಊರಿಗೆ ಕರೆತಂದಿದ್ದೇನೆ ಎಂದು ಹೇಳಿದ್ದಾಳೆ. ಮೆ 9 ರಂದು ಹರಿಯಾಣದಿಂದ ಹೊರಟು 17 ರಂದು ಅಂದರೆ 8 ದಿನಗಳಲ್ಲಿ ಸ್ವಗ್ರಾಮ ತಲುಪಿದ್ದಾಳೆ.

--------------

ETV Bharat Logo

Copyright © 2024 Ushodaya Enterprises Pvt. Ltd., All Rights Reserved.