ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿ ಭಾರತಕ್ಕೆ ಭೇಟಿ ನೀಡಲಿದ್ದು, ಇವರೊಂದಿಗೆ 12 ಮಂದಿ ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ಸದಸ್ಯರ ನಿಯೋಗವಿರಲಿದೆ. ಡೊನಾಲ್ಡ್ ಟ್ರಂಪ್, ಪತ್ನಿ ಮೆಲಾನಿಯಾ ಟ್ರಂಪ್, ಪುತ್ರಿ ಇವಾಂಕಾ ಹಾಗೂ ಅಳಿಯ ಜರೇದ್ ಕುಶ್ನೇರ್ ಆಗಮಿಸಲಿದ್ದಾರೆ.

ನಿಯೋಗದ ಇತರ ಸದಸ್ಯರು:
ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರೇಯನ್, ಹಣಕಾಸು ಸಚಿವ ವಿಲ್ಬರ್ ರಾಸ್ , ಭಾರತದ ಯುಎಸ್ ರಾಯಭಾರಿ ಕೆನ್ನೆತ್ ಜಸ್ಟರ್, ಇಂಧನ ಕಾರ್ಯದರ್ಶಿ ಡಾನ್ ಬ್ರೌಲೆಟ್, ಕಾರ್ಯಕಾರಿ ವೈಟ್ಹೌಸ್ ಮುಖ್ಯಸ್ಥ ಮಿಕ್ ಮುಲ್ವಾನೆ, ವೈಟ್ಹೌಸ್ ನ ಹಿರಿಯ ಸಲಹೆಗಾರ ಸ್ಟೀಫನ್ ಮಿಲ್ಲರ್, ವೈಟ್ಹೌಸ್ ನ ಸಾಮಾಜಿಕ ಮಾಧ್ಯಮ ನಿರ್ದೇಶಕ ಡಾನ್ ಸ್ಕ್ಯಾವಿನೊ, ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಮುಖ್ಯಸ್ಥ ಲಿಂಡ್ಸೆ ರೆನಾಲ್ಡ್ಸ್, ವೈಟ್ ಹೌಸ್ನ ಸಲಹೆಗಾರ ರಾಬರ್ಟ್ ಬ್ಲೇರ್ ಮತ್ತು ವೈಟ್ಹೌಸ್ ನ ಪತ್ರಿಕಾ ಕಾರ್ಯದರ್ಶಿ ಸ್ಟೆಫನಿ ಗ್ರಿಶಮ್ ಎಂದು ಅಧಿಕಾರಿ ತಿಳಿಸಿದ್ದಾರೆ.
ಟ್ರಂಪ್ ಇದೇ 24 ರಂದು 2 ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಮೂಲಗಳ ಪ್ರಕಾರ, ಈ ಭೇಟಿ ವೇಳೆ ಅನೇಕ ಸಭೆಗಳು ಮತ್ತು ಯುಎಸ್ ನಿಯೋಗದ ಜೊತೆ ಭಾರತ ಉನ್ನತ ಮಟ್ಟದ ಮಾತುಕತೆ ನಡೆಸಲಿದೆ. ಸಭೆ ಮುಗಿದ ನಂತರ ಟ್ರಂಪ್ ನಿಯೋಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಯೋಜಿಸಲಿರೋ ಔತಣಕೂಟದಲ್ಲಿ ಭಾಗಿಯಾಗಲಿದೆ. ಟ್ರಂಪ್ ಜೊತೆ ಪ್ರಧಾನಿ ಮೋದಿ ಕೂಡ ಆಗ್ರಾದ ತಾಜ್ಮಹಲ್ಗೆ ತೆರಳಿದ್ದಾರೆ. ನಂತರ ಫೆ.25 ರ ರಾತ್ರಿ 10 ಗಂಟೆಗೆ ಟ್ರಂಪ್ ವಿಶೇಷ ವಿಮಾನದಲ್ಲಿ ಅಮೆರಿಕಕ್ಕೆ ಹಿಂತಿರುಗಲಿದ್ದಾರೆ.