ತಂಜಾವೂರು (ತಮಿಳುನಾಡು): ತಂಜಾವೂರು ಜಿಲ್ಲೆಯ ಅಧಿರಮಪಟ್ಟಣಂನಲ್ಲಿರುವ ಮಸೀದಿಯಿಂದ 12 ಇಂಡೋನೇಷ್ಯಾದ ಪ್ರಜೆಗಳನ್ನು ಬಂಧಿಸಿ ಪುಝಾಲ್ ಜೈಲಿಗೆ ಕಳುಹಿಸಲಾಗಿದೆ.
ಕೆಲ ವಿದೇಶಿ ಪ್ರಜೆಗಳು ಸಿಎಂಪಿ ರಸ್ತೆಯ ಮಸೀದಿಯಲ್ಲಿ ತಂಗಿದ್ದಾರೆ ಎಂದು ಜಿಲ್ಲಾ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು.
ಅವರನ್ನು ತಂಜಾವೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದು, ಕೋವಿಡ್-19 ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ವರದಿ ಬಂದಿತ್ತು.
ವಿವಿಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.