ETV Bharat / bharat

ನಗರದಾದ್ಯಂತ 12 ಕೋವಿಡ್ ಸೇವಾ ಕೇಂದ್ರಗಳನ್ನು ತೆರೆದ ಹೈದರಾಬಾದ್ ಮಹಾನಗರ ಪಾಲಿಕೆ - ತೆಲಂಗಾಣ

ಕೋವಿಡ್​-19 ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್, ನಗರ ವ್ಯಾಪ್ತಿಯಲ್ಲಿ 12 ಸೇವಾ ಕೇಂದ್ರಗಳನ್ನು ತೆರೆದಿದೆ.

GHMC
ಹೈದರಾಬಾದ್ ಮಹಾನಗರ ಪಾಲಿಕೆ
author img

By

Published : Apr 9, 2020, 9:02 AM IST

ಹೈದರಾಬಾದ್ (ತೆಲಂಗಾಣ): ಕೊರೊನಾ ಹಡುವಿಕೆಯನ್ನು ನಿಯಂತ್ರಿಸಲು ಹೈದರಾಬಾದ್ ಮಹಾನಗರ ಪಾಲಿಕೆ ನಗರದ ವಿವಿಧ ಭಾಗಗಳಲ್ಲಿ 12 ಸೇವಾ ಕೇಂದ್ರಗಳನ್ನು ತೆರೆದಿದೆ.

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಹೆಚ್‌ಎಂಸಿ) ವ್ಯಾಪ್ತಿಯ ರಾಮ್‌ಗೋಪಾಲ್​​ಪೇಟ್​, ಶೇಖ್‌ಪೇಟೆ, ರೆಡ್ ಹಿಲ್ಸ್, ಮಲಕ್‌ಪೇಟೆ-ಸಂತೋಷ್‌ನಗರ, ಚಂದ್ರಯಂಗುಟ್ಟ, ಅಲ್ವಾಲ್, ಮೂಸಪೇಟೆ, ಕುಕಟ್​ಪಲ್ಲಿ, ಕುತುಬುಲ್ಲಾಪುರ-ಗಜುಲಾರಾಮರಂ, ಮಯೂರಿನಗರ, ಚಂದ್ರನಗರ, ಯೂಸುಫ್​ಗುಡಗಳಲ್ಲಿ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಪೊಲೀಸ್, ಕಂದಾಯ ಮತ್ತು ಆರೋಗ್ಯ ಇಲಾಖೆಗಳೊಂದಿಗೆ ಸಮನ್ವಯದಿಂದ ಜಿಎಚ್‌ಎಂಸಿ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಸೇವಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿಹೆಚ್‌ಎಂಸಿ ಆಯುಕ್ತ ಡಿ.ಎಸ್.ಲೋಕೇಶ್ ಕುಮಾರ್ ಹೇಳಿದರು.

ಈ ಪ್ರದೇಶಗಳಲ್ಲಿ 89 ಕೋವಿಡ್ -19 ಪಾಸಿಟಿವ್​ ಪ್ರಕರಣಗಳು ದಾಖಲಾದ ನಂತರ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳು ನೈರ್ಮಲ್ಯ ಮತ್ತು ಸೋಂಕು ನಿವಾರಕ ಔಷಧ ಸಿಂಪಡಿಸುವುದರ ಬಗ್ಗೆ ವಿಶೇಷ ಗಮನ ಹರಿಸಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.