ಲಾಹೋರ್: ಸಿಖ್ಖರ ಮೊದಲ ಗುರು ಮತ್ತು ಧರ್ಮ ಸಂಸ್ಥಾಪಕ ಗುರುನಾನಕ್ ದೇವ್ ಮಹಾರಾಜರ 550ನೇ ಜಯಂತ್ಯುತ್ಸವದಲ್ಲಿ ಭಾಗವಹಿಸಲು 1,100 ಭಾರತೀಯ ಸಿಖ್ಖರು ಪಾಕಿಸ್ತಾನ ತಲುಪಿದ್ದಾರೆ.
ನವೆಂಬರ್ 9ರಂದು ನಡೆಯುವ ಕರ್ತಾರ್ ಪುರ್ ಕಾರಿಡಾರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಖ್ಖರು ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ವಕ್ತಾರ ಅಮಿರ್ ಹಷ್ಮಿ ಹೇಳಿದ್ದಾರೆ.
ಭಾರತದಿಂದ 1,100 ಸಿಖ್ಖರ ಮೊದಲ ತಂಡ ವಾಘಾ ಗಡಿ ಮೂಲಕ ಕರ್ತಾರ್ ಪುರ್ ತಲುಪಿದ್ದಾರೆ. ಸಿಖ್ಖರು ತಮ್ಮೊಂದಿಗೆ 'ಗೋಲ್ಡನ್ ಪಾಲ್ಕಿ'ಯನ್ನು ಹೊತ್ತು ತಂದಿದ್ದಾರೆ ಎಂದು ಹೇಳಿದರು.
ನಗರ ಕೀರ್ತನ್ವನ್ನು (ಮೆರವಣಿಗೆ) ಪಂಜಾಬ್ ಗವರ್ನರ್ ಚೌಧರಿ ಸರ್ವಾರ್, ಇಟಿಪಿಬಿ ಅಧ್ಯಕ್ಷ ಅಮೀರ್ ಅಹ್ಮದ್ ಮತ್ತು ಪಾಕಿಸ್ತಾನ ಗುರುದ್ವಾರ ಸಿಖ್ ಪರಬಂಧಕ್ ಸಮಿತಿ ಅಧ್ಯಕ್ಷ ಸತ್ವಂತ್ ಸಿಂಗ್ ಅವರು ವಾಘಾ ಗಡಿಯಲ್ಲಿ ಸ್ವೀಕರಿಸಿದರು.