ETV Bharat / bharat

ಕೊರೊನಾ ಸೋಂಕು... ಬಾಲಿವುಡ್ ಗಾಯಕಿಯ ಸಂಪರ್ಕದಲ್ಲಿದ್ದ 11 ಮಂದಿಗೆ ಸಿಕ್ತು ಗುಡ್​ ನ್ಯೂಸ್​ - ಬಾಲಿವುಡ್ ಗಾಯಕಿ

ಕೊರೊನಾ ಸೋಂಕಿತ ಬಾಲಿವುಡ್ ಗಾಯಕಿ ಅವರ ಸಂಪರ್ಕದಲ್ಲಿದ್ದ 56 ಮಂದಿಯಲ್ಲಿ 11 ಮಂದಿಯ ವರದಿ ಬಂದಿದ್ದು ವರದಿ ನೆಗೆಟಿವ್ ಬಂದಿದೆ.

kanika kapoor
ಕನಿಕಾ ಕಪೂರ್
author img

By

Published : Mar 22, 2020, 7:47 PM IST

ಕಾನ್ಪುರ್​(ಉತ್ತರ ಪ್ರದೇಶ): ಬಾಲಿವುಡ್ ಗಾಯಕಿ ಕನಿಕಾ ಕಪೂರ್​ಗೆ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಅವರ ಸಂಪರ್ಕದಲ್ಲಿದ್ದ 56 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 11 ಮಂದಿಯ ವರದಿ​ ಹೊರಬಂದಿದ್ದು, ಅಷ್ಟೂ ಮಂದಿಯಲ್ಲಿ ಸೋಂಕು ಇಲ್ಲ ಎಂದು ತಿಳಿದುಬಂದಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಾನ್ಪುರ್​ ಜಿಲ್ಲೆಯ ಮ್ಯಾಜಿಸ್ಟ್ರೇಟ್​ ಆಗಿದ್ದ ದಿಯೋ ರಾಮ್​ ತಿವಾರಿ ''ಕನಿಕಾ ಕಪೂರ್​ ಮಾರ್ಚ್​ 13ರಂದು ತನ್ನ ಸಂಬಂಧಿಯಾದ ವಿಪುಲ್​ ಟಂಡನ್​ ಎಂಬುವರ ಕುಟುಂಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯ ವೈದ್ಯಾಧಿಕಾರಿ ಅಶೋಕ್​ ಶುಕ್ಲಾ ''ನಾವು ಅಷ್ಟೂ ಮಂದಿಯ ಸ್ಯಾಂಪಲ್​ಗಳನ್ನು ಶುಕ್ರವಾರ, ಶನಿವಾರ ಸಂಗ್ರಹಣೆ ಮಾಡಿದ್ದು ಎಲ್ಲರ ವರದಿಯನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ. ಕನಿಕಾ ಕಪೂರ್ ಸಂಬಂಧಿ ಟಂಡನ್ ಪರೀಕ್ಷಾ ವರದಿಯಲ್ಲಿ ನೆಗೆಟಿವ್​ ಬಂದಿದೆ''​ ಎಂದಿದ್ದಾರೆ. ಲಕ್ನೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕನಿಕಾ ಕಪೂರ್ ಮೇಲೆ ಈ ಹಿಂದೆ ಚಿಕಿತ್ಸೆಗೆ ಸಹಕಾರ ನೀಡದ ಆರೋಪ ಕೇಳಿಬಂದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.