ETV Bharat / bharat

ಅತ್ಯಾಚಾರವೆಸಗಿದ ಬಾಲಕಿಯ ಮದುವೆಯಾಗಿ ಆರೇ ತಿಂಗಳಿಗೆ ತಲಾಖ್ ಕೊಟ್ಟ! - 10 ವರ್ಷದ ಬಾಲಕಿ

ಬಾಲಕಿ ಮೇಲೆ ಅತ್ಯಾಚಾರವೆಸಗಿ ಮದುವೆಯಾಗಿದ್ದ ವ್ಯಕ್ತಿ ಇದೀಗ ಆಕೆಗೆ ತಲಾಖ್​ ನೀಡಿರುವ ಅಮಾನವೀಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

rapist Girl
rapist Girl
author img

By

Published : Aug 22, 2020, 7:32 PM IST

ಮುಜಾಫರನಗರ(ಯು.ಪಿ): ಸುಮಾರು ಆರು ತಿಂಗಳ ಹಿಂದೆ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕ ಬಳಿಕ ಆಕೆಯನ್ನು ಮದುವೆ ಮಾಡಿಕೊಂಡಿದ್ದ. ಇದು ನಡೆದ ಆರು ತಿಂಗಳ ಬಳಿಕ ಆಕೆಗೆ ತಲಾಖ್​ ನೀಡಿರುವ ಘಟನೆ ನಡೆದಿದೆ.

ಪ್ರಕರಣದ ವಿವರ:

ಉತ್ತರಪ್ರದೇಶದ ಮುಜಾಫರನಗರದಲ್ಲಿ ಈ ಘಟನೆ ನಡೆದಿದೆ. ಫೆಬ್ರವರಿ 16ರಂದು ಬಾಲಕಿಯ ಮೇಲೆ ಸೋದರ ಮಾವನೇ ಅತ್ಯಾಚಾರವೆಸಗಿದ್ದಾನೆ. ಘಟನೆ ತಿಳಿದ ಕುಟುಂಬಸ್ಥರು ಬಾಲಕಿಯನ್ನು ಆತನಿಗೆ ಕೊಟ್ಟು ಮದುವೆ ಮಾಡಿಸಿದ್ದರು. ಪುಟ್ಟ ಬಾಲಕಿಯನ್ನು ವರಿಸಿ ಆರು ತಿಂಗಳಾಗುತ್ತಲೇ ಆಕೆಗೆ ತಲಾಖ್(ವಿಚ್ಛೇಧನ)​ ನೀಡಿ ಆಗಸ್ಟ್​ 4ರಂದು ಬಾಲಕಿಯನ್ನು ಪೋಷಕರ ಮನೆಯಲ್ಲಿ ಬಿಟ್ಟು ಹೋಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ರಕ್ಷಣೆ ದೂರವಾಣಿಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ.

ಬಾಲಕಿ ಮದುವೆಯಾಗಿದ್ದ ವಿಷಯ ಬಹಿರಂಗ

ಬಾಲಕಿ ಮೇಲೆ ಅತ್ಯಾಚಾರವಾಗುತ್ತಿದ್ದಂತೆ ಯಾರಿಗೂ ಗೊತ್ತಿಲ್ಲದ ರೀತಿಯಲ್ಲಿ ಆರೋಪಿ ಜೊತೆ ಮದುವೆ ಮಾಡಿಸಲಾಗಿತ್ತು. ಮಕ್ಕಳ ರಕ್ಷಣಾ ಹೆಲ್ಪ್​ಲೈನ್​​ ತಂಡ ಕೌನ್ಸಿಲಿಂಗ್​ಗೋಸ್ಕರ ಬಾಲಕಿಯನ್ನು ಭೇಟಿ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಮುಜಾಫರನಗರ ಪೊಲೀಸ್ ಠಾಣೆಗೆ ಹಸ್ತಾಂತರಗೊಂಡಿದೆ. ಹೆಚ್ಚಿನ ವಿಚಾರಣೆ ನಡೆಸಲು ಸೋಮವಾರ ಪೊಲೀಸ್​ ಠಾಣೆಗೆ ಬರುವಂತೆ ಆರೋಪಿ ಹಾಗೂ ಪೋಷಕರಿಗೆ ಬುಲಾವ್​ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.