ಮೇಷ
ಇಂದು ನೀವು ಹಸಿರುಮಯ ಜೀವನ ಭಾವನೆಯಲ್ಲಿದ್ದೀರಿ ಮತ್ತು ತಾರೆಗಳೂ ಅನುಮೋದಿಸಿವೆ. ನೀವು ಗಿಡ ನೆಡಬಹುದು. ಕಸದ ಡಬ್ಬಿಗಳನ್ನು ಜೋಡಿಸುವ ಮೂಲಕ ನೆರೆಹೊರೆಯನ್ನು ಸ್ವಚ್ಛವಾಗಿರಿಸಬಹುದು. ನೀವು ಜೀವಿಸುವ ವಿಶ್ವ ಉತ್ತಮ ತಾಣವಾಗಲು ಬಯಸಿದ್ದರೆ ಹಂತ ಹಂತವಾಗಿ ಇದನ್ನು ಮಾಡಿರಿ.
ವೃಷಭ
ನಿಮ್ಮ ಸಿಹಿ ಮಾತುಗಳು ಸುಲಭವಾಗಿ ವ್ಯಾಪಾರ ವ್ಯವಹಾರಗಳನ್ನು ಮುಗಿಸುತ್ತವೆ. ದಿನ ಮುಂದುವರೆದಂತೆ ಚಟುವಟಿಕೆ ಮತ್ತು ಕಾರ್ಯಗಳು ನಿಧಾನಗೊಳ್ಳುತ್ತವೆ. ಭಾವನಾತ್ಮಕವಾಗುವ ಬಯಕೆ ತ್ಯಜಿಸಿ ಏಕೆಂದರೆ ಅದು ಸಂಘರ್ಷಗಳಿಗೆ ಎಡೆ ಮಾಡಿಕೊಟ್ಟು ಮುಂದಿನ ದಿನಗಳಲ್ಲಿ ನಿಮ್ಮನ್ನು ಕಾಡುತ್ತದೆ.
ಮಿಥುನ
ದೈನಂದಿನ ಒತ್ತಡದಿಂದ ಕೊಂಚ ಬಿಡುವು ತೆಗೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಬ್ಯಾಟರಿ ರೀಚಾರ್ಜ್ ಮಾಡಿಕೊಳ್ಳಲು ಸಂತೋಷದ ಪ್ರವಾಸ ಕಾಯುತ್ತಿದೆ. ಸ್ನೇಹಿತರು ನಿಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ನೀವು ಯಾರನ್ನಾದರೂ ಪ್ರೀತಿಸಿದರೆ ಮುಂದಡಿ ಇಡುತ್ತೀರಿ. ಸಂಜೆ ಧ್ಯಾನದಲ್ಲಿ ಮುಳುಗಲಿದ್ದೀರಿ.
ಕರ್ಕಾಟಕ
ಕೆಲಸದಲ್ಲಿ ಅದ್ಭುತ ಮತ್ತು ಅಸಾಧಾರಣ ದಿನ ನಿಮಗಾಗಿ ಕಾದಿದೆ. ವ್ಯವಹಾರಗಳನ್ನು ಪೂರೈಸುವಾಗ ನಿಮ್ಮ ಎಲ್ಲಾ ಸಂಧಾನ ಕೌಶಲ್ಯಗಳನ್ನು ಹೊಂದಿರಬೇಕು. ಅದು ಆರ್ಡರ್ ಪೂರೈಸುವುದಾಗಿರಲಿ ಅಥವಾ ಹೊಸ ಉತ್ಪನ್ನಗಳ ಬಿಡುಗಡೆ ಮತ್ತು ಮಾರ್ಕೆಟಿಂಗ್ ಆಗಿರಲಿ, ನಿಮ್ಮ ನಾಯಕತ್ವ ಕೌಶಲ್ಯಗಳು ಗಡುವಿನ ಅಂತಿಮ ಹಂತದಲ್ಲಿ ಮುಂಬದಿಗೆ ಬರುತ್ತವೆ.
ಸಿಂಹ
ನೀವು ಇಂದು ಎಲ್ಲಾ ಸವಾಲುಗಳು ಮತ್ತು ಅಡೆತಡೆಗಳನ್ನೂ ಯಶಸ್ವಿಯಾಗಿ ನಿಭಾಯಿಸುತ್ತೀರಿ. ನಿಮ್ಮ ಅಂತಿಮ ಗುರಿ ಯಾವುದೇ ಸನ್ನಿವೇಶದಲ್ಲೂ ವಿಜೇತರಾಗಿ ಹೊರಬರಬೇಕು ಎನ್ನುವುದು. ವ್ಯಾಪಾರದಲ್ಲಿ ತೀವ್ರ ಸ್ಪರ್ಧೆ ಎದುರಿಸುವ ಸಾಧ್ಯತೆ ಇದೆ. ವೈಯಕ್ತಿಕ ಜೀವನ ಯಾವುದೇ ಅಡೆತಡೆ ಇಲ್ಲದೆ ಮುಂದುವರೆಯುತ್ತದೆ.
ಕನ್ಯಾ ನಿಮ್ಮ ಸಂವಹನ ಮತ್ತು ಸೃಜನಶೀಲ ಕೌಶಲ್ಯಗಳು ಅತ್ಯುತ್ತಮ ಆಯುಧಗಳು. ನೀವು ಜೀವನದ ಆಸ್ವಾದದಿಂದ ಅತಿಯಾಗಿ ತುಂಬಿದ್ದೀರಿ ಮತ್ತು ಉತ್ಸಾಹದ ಬುಗ್ಗೆಯಾಗಿದ್ದೀರಿ. ಆದರೆ ನಿಮ್ಮ ಸೃಜನಶೀಲತೆ ಒತ್ತಡ ಅಥವಾ ಆಯಾಸಗೊಂಡಿದ್ದಾಗ ಮಾತ್ರ ಅರಳುತ್ತದೆ.
ತುಲಾ
ನಿಮ್ಮ ಅತ್ಯಂತ ಪ್ರಭಾವಿ ಮಿತ್ರನೊಬ್ಬ ನಿಮಗೆ ಅದೃಷ್ಟ ತರುತ್ತಾನೆ. ವ್ಯಾಪಾರದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಹೊಸ ಉದ್ಯಮ ಪ್ರಾರಂಭಿಸಲು ಶಕ್ತರಾಗುತ್ತೀರಿ. ನಿಮ್ಮ ದಕ್ಷತೆ ಮತ್ತು ಕಠಿಣ ಪರಿಶ್ರಮಕ್ಕೆ ಪ್ರಶಂಸೆ ಲಭಿಸುತ್ತದೆ.
ವೃಶ್ಚಿಕ
ನೀವು ಇಂದು ನಿಮ್ಮ ಬಾಸ್ ದುರಾಗ್ರಹಕ್ಕೆ ಪಾತ್ರರಾಗಬೇಕು. ನಿಮ್ಮ ಸಹೋದ್ಯೋಗಿಗಳು ನಿಮಗೆ ನೆರವು ನೀಡುವುದಿಲ್ಲ ಮತ್ತು ಅರೆಮನಸ್ಸಿನಿಂದ ಬೆಂಬಲಿಸುತ್ತಾರೆ. ಉದ್ಯೋಗದ ಬಾಗಿಲು ಬಡಿಯುತ್ತಿರುವ ಹೊಸಬರು ಸಂದರ್ಶನ ಮತ್ತು ಅಂತಿಮ ಆಯ್ಕೆಯಲ್ಲಿ ತಡವಾದ ಯಶಸ್ಸು ಕಾಣುತ್ತಾರೆ.
ಧನು
ನೀವು ಇಂದು ಯಾವುದು ಸರಿ ಮತ್ತು ನ್ಯಾಯವೋ ಅದನ್ನು ಎತ್ತಿ ಹಿಡಿಯುತ್ತೀರಿ. ಅನ್ಯಾಯ ಮತ್ತು ತಾರತಮ್ಯದ ವಿರುದ್ಧ ಹೋರಾಟ ಮಾಡಲು ನೀವು ಸರಿಯಾದ ಸ್ಫೂರ್ತಿಯನ್ನು ಹೊಂದಿದ್ದೀರಿ. ನಿಮ್ಮ ಇಚ್ಛಾಶಕ್ತಿಯಂತೆಯೇ ದಿನವೂ ಅದ್ಭುತವಾಗಿದೆ. ನೀವು ಇಂದು ಎದ್ದು ನಿಂತು ಎಲ್ಲವನ್ನೂ ಜಯಿಸಿರಿ.
ಮಕರ
ನಿಮ್ಮ ಎಲ್ಲಾ ಪರಿಶ್ರಮ ಮತ್ತು ಯೋಜನೆ ವಿಫಲವಾಗಿದ್ದಕ್ಕೆ ಅತ್ಯಂತ ನಿರಾಸೆಗೊಳ್ಳುತ್ತೀರಿ. ನಿಮಗೆ ಇತರರೊಂದಿಗೆ ಅಭಿಪ್ರಾಯಭೇದಗಳಿವೆ ಮತ್ತು ಕೆಲವೊಮ್ಮೆ ಈ ಭೇದಗಳು ವಾಗ್ಯುದ್ಧಕ್ಕೆ ಕಾರಣವಾಗುತ್ತವೆ. ಅಂತಹ ಸಾಮರಸ್ಯವಿಲ್ಲದ ಪರಿಸರ ನಿಮ್ಮ ಆತಂಕ ಹೆಚ್ಚಿಸುತ್ತದೆ. ಆದರೆ ಭರವಸೆ ಕಳೆದುಕೊಳ್ಳಬೇಡಿ. ಸುರಂಗದ ಕೊನೆಯಲ್ಲಿ ಬೆಳಕು ಮಿನುಗುತ್ತಿದೆ ಮತ್ತು ನೀವು ಖಂಡಿತ ಈ ಸಂಕಷ್ಟದ ಸಮಯದಿಂದ ಹೊರಬರುತ್ತೀರಿ.
ಕುಂಭ
ಕೆಲ ದಿನಗಳು ನೀವು ಪ್ರತಿಯೊಂದನ್ನೂ ತಿಳಿಯಲು ಪ್ರಯತ್ನಿಸುತ್ತೀರಿ, ಇದೂ ಕೂಡಾ ಅಂತಹ ಒಂದು ದಿನ. ನೀವು ಸರಿಯಾದ ಎದುರಾಳಿ ಎಂದು ಸಾಬೀತುಪಡಿಸುತ್ತೀರಿ. ನೀವು ವಿರೋಧಿಗಳ ಯೋಜನೆಗಳನ್ನೂ ತಲೆಕೆಳಗು ಮಾಡುತ್ತೀರಿ, ಅದು ನಿಮಗೆ ಅನುಕೂಲವಾಗುತ್ತದೆ. ವಿದ್ವಾಂಸರಾಗಲು ಅದು ನಿಮಗೆ ಅಗತ್ಯ.
ಮೀನ
ಜೀವನದಲ್ಲಿ ನಿಮ್ಮ ಹಣಕಾಸುಗಳನ್ನು ಯೋಜಿಸುವುದು ಅಗತ್ಯ, ಮತ್ತು ಇಂದು ನಿಮ್ಮ ಶಕ್ತಿಯನ್ನು ಅದಕ್ಕಾಗಿ ವ್ಯಯಿಸಬೇಕು. ಹಣದ ವಿಷಯದಲ್ಲಿ ನೀವು ಜುಗ್ಗರಾಗಿದ್ದೀರಿ. ಕುಟುಂಬದಲ್ಲಿ ಅನಿರೀಕ್ಷಿತ ರೋಗ ರುಜಿನ ನಿಮಗೆ ಒತ್ತಡ ತರುತ್ತದೆ. ನಂತರದ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ.